ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ದಿ.ಸೈಯ್ಯದ್ ಖಲೀಲ್ ಸಾಹೇಬರ ದೂರದೃಷ್ಟಿಯ ಕೂಸು: ಯೂನೂಸ್ ಕಾಝಿಯಾ
ಭಟ್ಕಳ: ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ದಿ.ಸೈಯ್ಯದ್ ಖಲೀಲ್ ಸಾಹೇಬರ ದೂರದೃಷ್ಟಿಯ ಕೂಸಾಗಿದೆ ಎಂದು ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯೂನೂಸ್ ಕಾಝಿಯಾ ಹೇಳಿದರು.
ಅವರು ಶುಕ್ರವಾರ ಸಂಜೆ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಆಯೋಜಿಸಿದ್ದ AUZ BMYF ಟ್ರೋಫಿ-2025ನ್ನು ಅನಾವರಣಗೊಳಿಸಿ ಮಾತನಾಡಿದರು. ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಸ್ಥಾಪಕ ದಿವಂಗತ ಎಸ್.ಎಮ್. ಸೈಯದ್ ಖಲೀಲುರ ರಹ್ಮಾನ್ ಅವರ ದೃಷ್ಟಿಕೋನವನ್ನು ಸ್ಮರಿಸಿದ್ದು, ಸ್ಥಳೀಯ ಯುವಕರಲ್ಲಿರುವ ಅಸಾಮಾನ್ಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಉತ್ತಮ ಕ್ರೀಡಾ ಸೌಕರ್ಯಗಳ ಅಗತ್ಯ ಇದೆ ಎಂಬುದನ್ನು ಒತ್ತಿ ಹೇಳಿದರು.
ಮಜ್ಲಿಸ್ ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಬಂಧ್ರಿ ಅವರು ದೈಹಿಕ ಶ್ರಮ ಮತ್ತು ಶಿಸ್ತು ಜೀವನದ ಪ್ರಮುಖ ಅಂಶಗಳಾಗಿ ಎಂದರು.
ಕಾರ್ಯಕ್ರಮವು ಇಯಾದ್ ಎಸ್.ಎಂ. ನದ್ವಿ ಅವರ ಕಿರಾತ್ ಮತ್ತು ಉಸ್ಮಾನ್ ಗನಿ ಮುಖೀಮ್ ಹಲ್ಲಾರೆ ಅವರ ನಾತ್ ಪಠಣದೊಂದಿಗೆ ಆರಂಭಗೊಂಡಿತು. BMYFನ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹುಸೇನ್ ಹಲ್ಲಾರೆ ಸ್ವಾಗತಿಸಿದರು. ಅಧ್ಯಕ್ಷ ಮೌಲಾನಾ ವಸಿಯುಲ್ಲಾ DF ಟೂರ್ನಮೆಂಟ್ ಉದ್ದೇಶಗಳನ್ನು ವಿವರಿಸಿದರು. ಆಕರ್ಷಕ ಟ್ರೋಫಿಯನ್ನು ಗಣ್ಯ ಅತಿಥಿಗಳಿಂದ ಬಿಡುಗಡೆ ಮಾಡಲಾಯಿತು. ತಲ್ಹಾ ತಿರುಚನಾಪಳ್ಳಿ ಧನ್ಯವಾದ ಅರ್ಪಿಸಿದರು.
ಶನಿವಾರ ಬೆಳಿಗ್ಗೆ ಅಲ್-ಫಲಾಹ್ ಭಟ್ಕಳ ಮತ್ತು ಅಲ್-ವಾಫಾ ಮುರ್ಡೇಶ್ವರ ನಡುವಿನ ಮೊದಲ ಪಂದ್ಯದಿಂದ ಟೂರ್ನಮೆಂಟ್ ಪ್ರಾರಂಭವಾಗಲಿದೆ. ಮಧ್ಯಾಹ್ನ ಮೂನ್‌ಸ್ಟಾರ್ ಭಟ್ಕಳ ಮತ್ತು ಯಂಗ್‌ಸ್ಟಾರ್ ಭಟ್ಕಳ ನಡುವಿನ ಸ್ಪರ್ಧೆ ಹೆಚ್ಚು ಕಸರತ್ತಿನ ಪಂದ್ಯವಾಗುವ ನಿರೀಕ್ಷೆ ಇದೆ.
ಟೂರ್ನಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ಮೊಹಿದ್ದೀನ್ ಅಲ್ತಾಫ್ ಖಾರುರಿ (ಅಧ್ಯಕ್ಷರು, ಭಟ್ಕಳ ಪುರಸಭೆ, ಭಟ್ಕಳ), ಸೈಯದ್ ಇಮ್ರಾನ್ ಲಂಕಾ (ಉಪಾಧ್ಯಕ್ಷರು, ಜಾಲಿ ಪಟ್ಠಣ ಪಂಚಾಯತ್), ಮುದಸ್ಸಿರ್ ಇಕ್ಕೇರಿ (ಕ್ರೀಡಾ ಸಲಹೆಗಾರರು, ಬೆಂಗಳೂರು ಸೆಂಟ್ರಲ್ ಯುನಿವರ್ಸಿಟಿ), ಮೌಲವಿ ಅಝಿಝುರ‍್ರಹ್ಮಾನ್ ರುಕ್ನುದ್ದೀನ್ (ಮಾಜಿ ಅಧ್ಯಕ್ಷರು, BMYF), ಅಬು ಫೈಸಲ್ ಮೊಹ್ತಿಶಮ್ ಮತ್ತಿತರರು ಇದ್ದರು.