ಅರಣ್ಯ ಹಕ್ಕು ಕಾಯಿದೆಯಲ್ಲಿನ ಪುನರ್ ಪರಿಶೀಲನಾ ಪ್ರಕ್ರಿಯೆ: ಆಕ್ಷೇಪಣೆ ಪರಿಶೀಲಿಸಿ ತುರ್ತುವರದಿ ಮಂಡಿಸಲು ಮುಖ್ಯಕಾರ್ಯದರ್ಶಿ ನಿರ್ದೇಶನ

Update: 2025-01-07 13:44 GMT

ಶಿರಸಿ: ರಾಜ್ಯಾದಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜರುಗುತ್ತಿರುವ ಅರ್ಜಿಗಳ ಪುನರ್ ಪರಿಶೀಲನಾ ನಿಯಮದಲ್ಲಿನ ಆಕ್ಷೇಪವನ್ನ ಪರಿಶೀಲಿಸಿ ತುರ್ತುವರದಿ ಮಂಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲೀನಿ ರಜನೀಶ ಅವರು ಕಾರ್ಯದರ್ಶಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅವರಿಗೆ ನಿರ್ದೇಶನಾ ನೀಡಿದ್ದಾರೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನ ಮುಖ್ಯಮಂತ್ರಿ ಗೃಹಕಛೇರಿ ಕೃಷ್ಣಾದಲ್ಲಿ ಭೇಟಿಯಾಗಿ ರಾಜ್ಯಮಟ್ಟದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮೇಲ್ಚಿಚಾರಣಾ ಸಮಿತಿಯು ನ.28,2024 ರಂದು ನಿರ್ಣಯಿಸಿದ ನಡುವಳಿಕೆಗೆ ಆಕ್ಷೇಪಣಾ ಪತ್ರ ನೀಡಿದ ಹಿನ್ನಲೆಯಲ್ಲಿ ಮುಖ್ಯಕಾರ್ಯದರ್ಶಿಯವರು ಮೇಲಿನಂತೆ ನಿರ್ದೇಶನ ನೀಡಿದ್ದಾರೆಂದು ಹೋರಾಟ ಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮೇಲಿನಂತೆ ಹೇಳಿದರು.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅಸಮರ್ಪಕ ಅಸ್ತಿತ್ವದಲ್ಲದ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ಪರಿಶೀಲನೆ ಆಗುತ್ತಿರುವ ಕ್ರಮವನ್ನ ಮತ್ತು ಮೂರು ತಲೆಮಾರಿನ ನಿರ್ದಿಷ್ಟ ದಾಖಲೆಗೆ ಒತ್ತಾಯಿಸುತ್ತಿರುವ ಅಂಶವನ್ನ ಆಕ್ಷೇಪಣಾ ಪತ್ರದಲ್ಲಿ ಪ್ರಸ್ತಾ ಪಿಸಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪುನರ್ ಪರಿಶೀಲಿನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೇಂದು ಆಕ್ಷೇಪಣಾ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದಂತ ಪುನರ್ ಪರಿಶೀಲನಾ ಪ್ರಕ್ರಿಯೆ ಜರುಗುತ್ತಿರುವ ಹಿನ್ನಲೆಯಲ್ಲಿ ಹೋರಾಟಗಾರರ ವೇದಿಕೆ ಸಲ್ಲಿಸಿದ ಆಕ್ಷೇಪಣಾ ಪತ್ರಕ್ಕೆ ರಾಜ್ಯ ಅರಣ್ಯ ಭೂಮಿ ಹಕ್ಕು ಮೇಲ್ವಿಚಾರಣಾ ಸಮಿತಿ ಸೂಕ್ತ ಕ್ರಮ ತೆಗೆದುಕೊಳ್ಳಬಹುದೆಂಬ ಆಶಯವನ್ನು ಅಧ್ಯಕ್ಷ ರವೀಂದ್ರ ನಾಯ್ಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News