ಭಟ್ಕಳದಲ್ಲಿ "ಭೂ ಸುರಕ್ಷಾ" ಯೋಜನೆಗೆ ಚಾಲನೆ

Update: 2025-01-13 12:02 GMT

ಭಟ್ಕಳ: ಭಟ್ಕಳ ತಾಲೂಕು ಆಡಳಿತಸೌಧದಲ್ಲಿ ಭೂದಾಖಲೆಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದ "ಭೂ ಸುರಕ್ಷಾ" ಯೋಜನೆಗೆ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು ರವಿವಾರ ಅಧಿಕೃತ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 'ಭೂ ಸುಧಾರಣೆ ಆಪ್' ಅನ್ನು ತಯಾರಿಸಿದ್ದು, ಈ ಯೋಜನೆಯಡಿ ಭೂದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ 25-30% ದಾಖಲೆಗಳು ಸ್ಕ್ಯಾನ್ ಮಾಡಲಾಗಿದೆ. ಜೂನ್ ತಿಂಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ, ಆದರೆ 15 ದಿನಗಳಿಂದ 1 ತಿಂಗಲು ವಿಳಂಬವಾಗುವ ಸಾಧ್ಯತೆ ಇದೆ. ಈ ಮೊದಲು ಎಂಟ್ರಿ ಉತ್ತರ ಪಡೆಯಲು ಜನರು ಏಜೆಂಟ್‌ ಗಳನ್ನು ಸಂಪರ್ಕಿಸುವ ಅವಶ್ಯಕತೆ ಇತ್ತು. ಆದರೆ ಈಗ, ಯಾವುದೇ ಅರ್ಜಿ ಅಥವಾ ವಿಳಂಬವಿಲ್ಲದೆ, ಕ್ಷಣದಲ್ಲೇ ಎಂಟ್ರಿ ಉತ್ತರ ಮತ್ತು ಭೂಮಿಯ ಎಲ್ಲಾ ದಾಖಲೆಗಳನ್ನು ಪಡೆಯುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ," ಎಂದು ತಿಳಿಸಿದರು.

ಈ ಯೋಜನೆಯಡಿಯಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದ ಎಲ್ಲ ದೋಷಗಳು ನಿವಾರಣೆಗೊಳ್ಳಲಿದ್ದು, ಸಾರ್ವಜನಿಕರಿಗೆ ಬೇಗ ಮತ್ತು ಸುಲಭವಾಗಿ ದಾಖಲೆಗಳನ್ನು ಪಡೆಯುವ ಅವಕಾಶ ಒದಗಲಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಶಿರಸ್ತೆದಾರ್ ಪ್ರವೀಣ, ಮಣಿ ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News