RCB ಅನ್​ಬಾಕ್ಸ್​​​ ಈವೆಂಟ್ ನಲ್ಲಿ ಕನ್ನಡದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ

Update: 2024-03-19 18:15 GMT

ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ RCB ಅನ್‌ ಬಾಕ್ಸ್ ಕಾರ್ಯಕ್ರಮದಲ್ಲಿ “ಇದು ಆರ್‌ಸಿಬಿಯ ಹೊಸ ಅಧ್ಯಾಯ” ಎಂದು ವಿರಾಟ್‌ ಕೊಹ್ಲಿ ಅವರು ಕನ್ನಡದಲ್ಲಿಯೇ ಮಾತನಾಡಿ, ಕಾರ್ಯಕ್ರಮದ ಕಿಚ್ಚು ಹೆಚ್ಚಿಸಿದರು.

ಕೊಹ್ಲಿಯ ಕನ್ನಡಕ್ಕೆ ನೆರೆದಿದ್ದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿದ್ದಾರೆ. ಹದಿನೇಳನೇ ಆವೃತ್ತಿಯ ಐಪಿಎಲ್ ಗಿಂತ ಮೊದಲು ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ತಂಡ ತನ್ನ ಹೆಸರನ್ನು ಅಧಿಕೃತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಾಯಿಸಿಕೊಂಡಿದೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮಂಗಳವಾರ ನಡೆದ RCB ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಫ್ರಾಂಚೈಸಿಯ ಹೊಸ ಹೆಸರಿನ ಜೊತೆಗೆ ಹೊಸ ಜೆರ್ಸಿ ಹಾಗೂ ಲಾಂಛನವನ್ನು ಅನಾವರಣಗೊಳಿಸಲಾಗಿದೆ. ಜೆರ್ಸಿಯ ಬಣ್ಣವನ್ನು ಕಪ್ಪು, ಕೆಂಪು ಹಾಗೂ ಚಿನ್ನದ ಬಣ್ಣದಿಂದ ನೀಲಿ, ಕೆಂಪು ಹಾಗೂ ಬಂಗಾರದ ಬಣ್ಣಕ್ಕೆ ಬದಲಿಸಲಾಗಿದೆ.

ನಾಯಕ ಎಫ್ಡು ಪ್ಲೆಸಿಸ್, ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮತಿ ಮಂಧಾನ ವೇದಿಕೆಯಲ್ಲಿ ಉಪಸ್ಥಿತರಿದ್ದು, ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News