ಲೋಕಸಭಾ ಕ್ಷೇತ್ರಗಳು ಮತ್ತು ಪಕ್ಷಗಳ ಬಲಾಬಲ

ಮತ್ತೊಂದು ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದೆ. ದೇಶದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿವೆ. ಎಲ್ಲ ರಾಜ್ಯಗಳ ಲೋಕಸಭಾ ಕ್ಷೇತ್ರಗಳು, ಪ್ರಬಲವಾಗಿರುವ ರಾಜ್ಯಗಳು, ದೇಶಕ್ಕೆ ಪ್ರಧಾನಿಗಳನ್ನು ಕೊಟ್ಟ ಲೋಕಸಭಾ ಕ್ಷೇತ್ರಗಳು ಇವೆಲ್ಲವುಗಳ ವಿವರ ಅತ್ಯಂತ ಕುತೂಹಲಕಾರಿ. ಇವೆಲ್ಲವುಗಳನ್ನು ಗಮನಿಸುತ್ತಲೇ ವಿವಿಧ ಪಕ್ಷಗಳ ಬಲಾಬಲದ ಚಿತ್ರಣವು ಸಿಗುತ್ತದೆ. ಅವೆಲ್ಲದರ ಕುರಿತ ಒಂದು ನೋಟ ಇಲ್ಲಿದೆ.

Update: 2023-12-23 05:06 GMT

Photo: PTI

ಸರಣಿ- 2

ದೇಶದ ಲೋಕಸಭಾ ಕ್ಷೇತ್ರಗಳು ವೈವಿಧ್ಯ ಮಯವಾಗಿವೆ. ಹಾಗೆಯೇ, 80 ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಿಂದ ಹಿಡಿದು ಒಂದೊಂದೇ ಲೋಕಸಭಾ ಸ್ಥಾನಗಳನ್ನು ಹೊಂದಿರುವ ಪುಟ್ಟ ಪುಟ್ಟ ರಾಜ್ಯಗಳೂ ಇವೆ.

ಅತಿ ಹೆಚ್ಚು ಲೋಕಸಭಾ ಸ್ಥಾನಗಳುಳ್ಳ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಆನಂತರ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ತಮಿಳುನಾಡು ಬರುತ್ತವೆ. ಮಧ್ಯಪ್ರದೇಶ 6ನೇ ಸ್ಥಾನದಲ್ಲಿದ್ದರೆ, ಕರ್ನಾಟಕ 7ನೇ ಸ್ಥಾನದಲ್ಲಿ ಬರುತ್ತದೆ.

ಕೇಂದ್ರಾಡಳಿತ ಪ್ರದೇಶಗಳ ಪ್ರಾತಿನಿಧ್ಯವನ್ನು

ನೋಡುವುದಾದರೆ,

ಅಂಡಮಾನ್ ಮತ್ತು ನಿಕೋಬಾರ್-1, ಚಂಡಿಗಡ-1, ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು - 2, ದಿಲ್ಲಿ-7, ಲಕ್ಷದ್ವೀಪ-1, ಪುದುಚೇರಿ-1, ಜಮ್ಮು ಮತ್ತು ಕಾಶ್ಮೀರ-5, ಲಡಾಖ್-1

ಈಗಿನ ಲೋಕಸಭೆಯಲ್ಲಿನ ಪಕ್ಷವಾರು ಪ್ರಾತಿನಿಧ್ಯ:

ಎನ್‌ಡಿಎ ಪಾಲುದಾರ ಪಕ್ಷಗಳು:

ಬಿಜೆಪಿ-301 ಶಿವಸೇನಾ-13, ಆರ್‌ಎಲ್‌ಜೆ ಪಿ-5 ಅಪ್ನಾದಳ-2 ಎನ್‌ಸಿಪಿ, ಜೆಡಿಎಸ್, ಎಲ್‌ಜೆಪಿ(ಆರ್‌ವಿ), ಎನ್‌ಡಿಪಿಪಿ, ಎಜೆಎಸ್‌ಯು, ಎನ್‌ಪಿಪಿ, ಎನ್‌ಪಿಎಫ್ ಹಾಗೂ ಎಸ್‌ಕೆಎಂ ಎಂ ತಲಾ 1 ಸ್ಥಾನಗಳು

ಕಾಂಗ್ರೆಸ್ ಮತ್ತಿತರ ಪಕ್ಷಗಳು:

ಕಾಂಗ್ರೆಸ್-50, ಡಿಎಂಕೆ-24, ಟಿಎಂಸಿ-23, ಜೆಡಿಯು-16, ಶಿವಸೇನೆ (ಉದ್ಧವ್ ಠಾಕ್ರೆ ಬಣ) 6, ಎನ್‌ಸಿಪಿ, ಐಯುಎಂಎಲ್, ಜೆಕೆಎನ್‌ಸಿ, ಸಿಪಿಎಂ, ಎಸ್‌ಪಿ ತಲಾ-3, ಸಿಪಿಐ-2, ಜೆಎಂಎಂ, ಎಎಪಿ, ವಿಸಿಕೆ, ಆರ್‌ಎಸ್‌ಪಿ, ಕೆಸಿಎಂ ತಲಾ 1 ಸ್ಥಾನಗಳು

ಅಲ್ಲದೆ ವೈಎಸ್‌ಆರ್‌ಸಿಪಿ-22, ಬಿಜೆಡಿ-12, ಬಿಎಸ್‌ಪಿ, ಬಿಆರ್‌ಎಸ್ ತಲಾ 9, ಟಿಡಿಪಿ 3, ಎಸ್‌ಎಡಿ, ಎಐಎಂಐಎಂ ತಲಾ 2, ಎಐಯುಡಿಎಫ್, ಎಸ್‌ಎಡಿ(ಎ), ಆರ್‌ಎಲ್‌ಪಿ ಮತ್ತು ಪಕ್ಷೇತರ ತಲಾ 1 ಸ್ಥಾನಗಳು

ಪ್ರಧಾನಿಗಳಾದವರ ಪಕ್ಷ, ಲೋಕಸಭಾ ಕ್ಷೇತ್ರ ಮತ್ತು ಅವಧಿಯನ್ನು ವಿವರವಾಗಿ ಗಮನಿಸುವುದಾದರೆ...

1 ಜವಾಹರಲಾಲ್ ನೆಹರೂ ಕಾಂಗ್ರೆಸ್ ಉತ್ತರ ಪ್ರದೇಶದ ಫೂಲ್ಪುರ ಕ್ಷೇತ್ರ

ನೆಹರೂ ಅಧಿಕಾರದಲ್ಲಿದ್ದ ಅವಧಿ

15 ಆಗಸ್ಟ್ 1947 ರಿಂದ 15 ಎಪ್ರಿಲ್ 1952

15 ಎಪ್ರಿಲ್ 1952 ರಿಂದ 17 ಎಪ್ರಿಲ್ 1957

17 ಎಪ್ರಿಲ್ 1957 ರಿಂದ 2 ಎಪ್ರಿಲ್ 1962

2 ಎಪ್ರಿಲ್ 1962 ರಿಂದ 27 ಮೇ 1964

ನೆಹರೂ ನಿಧನದ ನಂತರ ಗುಲ್ಜಾರಿಲಾಲ್ ನಂದಾ ಹಂಗಾಮಿ ಪ್ರಧಾನಿಯಾಗಿ 27 ಮೇ 1964ರಿಂದ 9 ಜೂನ್ 1964ರವರೆಗೆ ಹೊಣೆ ನಿಭಾಯಿಸಿದ್ದರು.

----------------

2 ಲಾಲ್ ಬಹದ್ದೂರ್ ಶಾಸ್ತ್ರಿ -ಕಾಂಗ್ರೆಸ್-ಉತ್ತರ ಪ್ರದೇಶದ ಅಲಹಾಬಾದ್ ಕ್ಷೇತ್ರ - 9 ಜೂನ್ 1964ರಿಂದ 11 ಜನವರಿ 1966

ಶಾಸ್ತ್ರಿ ಅಕಾಲಿಕ ನಿಧನದ ಬಳಿಕ ಮತ್ತೊಮ್ಮೆ ಗುಲ್ಜಾರಿಲಾಲ್ ನಂದಾ ಅವರೇ 1966ರ ಜನವರಿ 11ರಿಂದ 24ರವರೆಗೆ ಹಂಗಾಮಿಯಾಗಿ ಪ್ರಧಾನಿ ಹುದ್ದೆ ನಿರ್ವಹಿಸಬೇಕಾಯಿತು.

----------------

3 ಇಂದಿರಾ ಗಾಂಧಿ-ಕಾಂಗ್ರೆಸ್-ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರ

ಇಂದಿರಾ ಅಧಿಕಾರದಲ್ಲಿದ್ದ ಅವಧಿ

24 ಜನವರಿ 1966ರಿಂದ 4 ಮಾರ್ಚ್ 1967

4 ಮಾರ್ಚ್ 1967ರಿಂದ 15 ಮಾರ್ಚ್ 1971

15 ಮಾರ್ಚ್ 1971ರಿಂದ 24 ಮಾರ್ಚ್ 1977

ಇದಾದ ಬಳಿಕ ಮೂರು ವರ್ಷ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಕೂತಿತು. ಮತ್ತೆ ಅದು ಅಧಿಕಾರಕ್ಕೆ ಬಂದಾಗ ಪುನಃ ಇಂದಿರಾ ಗಾಂಧಿಯವರು ಪ್ರಧಾನಿಯಾದರು. ಈ ಬಾರಿ ಅವರು ಆಂಧ್ರಪ್ರದೇಶದ ಮೇದಕ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ನಾಲ್ಕನೇ ಅವಧಿಗೆ ಇಂದಿರಾ ಪ್ರಧಾನಿಯಾದ ಸಮಯ - 14 ಜನವರಿ 1980ರಿಂದ 31 ಅಕ್ಟೋಬರ್ 1984

----------------

4 ಮೊರಾರ್ಜಿ ದೇಸಾಯಿ-ಜನತಾ ಪಕ್ಷ-ಗುಜರಾತ್‌ನ ಸೂರತ್ ಕ್ಷೇತ್ರ - 24 ಮಾರ್ಚ್ 1977ರಿಂದ 28 ಜುಲೈ 1979

----------------

5 ಚೌಧರಿ ಚರಣ್ ಸಿಂಗ್-ಜನತಾ ಪಕ್ಷ(ಸೆಕ್ಯುಲರ್) ಉತ್ತರ ಪ್ರದೇಶದ ಬಾಘಪತ್ ಕ್ಷೇತ್ರ - 28 ಜುಲೈ 1979ರಿಂದ 14 ಜನವರಿ 1980

----------------

6 ರಾಜೀವ್ ಗಾಂಧಿ-ಕಾಂಗ್ರೆಸ್-ಉತ್ತರ ಪ್ರದೇಶದ ಅಮೇಥಿ ಕ್ಷೇತ್ರ

ರಾಜೀವ್ ಪ್ರಧಾನಿಯಾಗಿದ್ದ ಅವಧಿ

31 ಅಕ್ಟೋಬರ್ 1984ರಿಂದ 31 ಡಿಸೆಂಬರ್ 1984

31 ಡಿಸೆಂಬರ್ 1984ರಿಂದ 2 ಡಿಸೆಂಬರ್ 1989

----------------

7 ವಿ.ಪಿ. ಸಿಂಗ್-ಜನತಾ ದಳ-ಉತ್ತರ ಪ್ರದೇಶದ ಫತೇಪುರ್ - 2 ಡಿಸೆಂಬರ್ 1989 ರಿಂದ 10 ನವೆಂಬರ್ 1990

----------------

8 ಚಂದ್ರಶೇಖರ್ ರಾಷ್ಟ್ರೀಯ ಸಮಾಜವಾದಿ ಜನತಾ ಪಕ್ಷ ಉತ್ತರ ಪ್ರದೇಶದ ಬಲ್ಲಿಯಾ ಕ್ಷೇತ್ರ - 10 ನವೆಂಬರ್ 1990ರಿಂದ 21 ಜೂನ್ 1991

----------------

9 ಪಿ.ವಿ. ನರಸಿಂಹರಾವ್ ಕಾಂಗ್ರೆಸ್ ಆಂಧ್ರಪ್ರದೇಶದ ನಂದ್ಯಾಲ್ - 21 ಜೂನ್ 1991ರಿಂದ 16 ಮೇ 1996

----------------

10 ಎ.ಬಿ. ವಾಜಪೇಯಿ ಬಿಜೆಪಿ ಉತ್ತರ ಪ್ರದೇಶದ ಲಕ್ನೊ ಕ್ಷೇತ್ರ - 16 ಮೇ 1996ರಿಂದ 1 ಜೂನ್ 1996

ಕೆಲವೇ ದಿನಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಾಗ ಹುದ್ದೆಯಿಂದಿಳಿದ ವಾಜಪೇಯಿ, ಎರಡು ವರ್ಷಗಳ ಬಳಿಕ ಮತ್ತೆ ಪ್ರಧಾನಿಯಾದರು. ಆ ಅವಧಿಗಳೆಂದರೆ,

19 ಮಾರ್ಚ್ 1998ರಿಂದ 10 ಅಕ್ಟೋಬರ್ 1999

10 ಅಕ್ಟೋಬರ್ 1999ರಿಂದ 22 ಮೇ 2004

----------------

11 ಎಚ್.ಡಿ. ದೇವೇಗೌಡ-ಜನತಾ ದಳ-ಕರ್ನಾಟಕದಿಂದ ರಾಜ್ಯಸಭಾ ಸದಸ್ಯ - 1 ಜೂನ್ 1996ರಿಂದ 21 ಎಪ್ರಿಲ್ 1997

----------------

12 ಐ.ಕೆ. ಗುಜ್ರಾಲ್-ಜನತಾ ದಳ-ಬಿಹಾರದಿಂದ ರಾಜ್ಯ ಸಭಾ ಸದಸ್ಯ - 21 ಎಪ್ರಿಲ್ 1997ರಿಂದ 19 ಮಾರ್ಚ್ 1998

----------------

13 ಮನಮೋಹನ್ ಸಿಂಗ್-ಕಾಂಗ್ರೆಸ್-ಅಸ್ಸಾಮಿನಿಂದ ರಾಜ್ಯಸಭಾ ಸದಸ್ಯ

ಮನಮೋಹನ್ ಸಿಂಗ್ ಅವಧಿ

22 ಮೇ 2004ರಿಂದ 22 ಮೇ 2009

22 ಮೇ 2009ರಿಂದ 26 ಮೇ 2014

----------------

14 ನರೇಂದ್ರ ಮೋದಿ-ಬಿಜೆಪಿ-ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರ. 2014ರಿಂದ ಪ್ರಧಾನಿ ಹುದ್ದೆಯಲ್ಲಿದ್ದಾರೆ.

ಮೊದಲ ಅವಧಿ - 26 ಮೇ 2014ರಿಂದ 30 ಮೇ 2019

ಅನಂತರ 30 ಮೇ 2019ರಿಂದ ಹುದ್ದೆಯಲ್ಲಿದ್ದಾರೆ.

---------------

ಈವರೆಗಿನ ಪ್ರಧಾನಿಗಳಲ್ಲಿ ನೆಹರೂ, ಶಾಸ್ತ್ರಿ, ಇಂದಿರಾ ಗಾಂಧಿ, ಚರಣ್ ಸಿಂಗ್, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್, ವಾಜಪೇಯಿ ಮತ್ತು ಮೋದಿ ಈ 9 ಪ್ರಧಾನಿಗಳು ಉತ್ತರ ಪ್ರದೇಶವನ್ನೇ ಪ್ರತಿನಿಧಿಸಿದವರಾಗಿದ್ದಾರೆ.

--------------

► ಪ್ರಧಾನಿ ಹುದ್ದೆಯಲ್ಲಿ ಅತಿ ದೀರ್ಘ ಅವಧಿ ಅಂದರೆ 16 ವರ್ಷ 286 ದಿನ ಅಧಿಕಾರದಲ್ಲಿದ್ದವರು ನೆಹರೂ.

► ಅತಿ ಕಡಿಮೆ ಅಂದರೆ 16 ದಿನಗಳ ಕಾಲ ಪೂರ್ಣ ಪ್ರಮಾಣದ ಪ್ರಧಾನಿ ಆಗಿದ್ದವರು ವಾಜಪೇಯಿ.

► ಪ್ರಧಾನಿಯಾಗಿ ಐದು ವರ್ಷಗಳ ಅವಧಿ ಪೂರ್ಣಗೊಳಿಸಿದ ಪ್ರಪ್ರಥಮ ಕಾಂಗ್ರೆಸೇತರ ಪ್ರಧಾನಿಯೂ ವಾಜಪೇಯಿಯವರೇ.

► ಇಂದಿರಾ ಗಾಂಧಿ ಈ ದೇಶದ ಪ್ರಪ್ರಥಮ ಹಾಗೂ ಏಕೈಕ ಮಹಿಳಾ ಪ್ರಧಾನಿ.

► ರಾಜೀವ್ ಗಾಂಧಿ ಅತ್ಯಂತ ಕಿರಿಯ ವಯಸ್ಸಲ್ಲಿ ಅಂದ್ರೆ 40 ವರ್ಷಕ್ಕೆ ಪ್ರಧಾನಿ ಆದವರು.

► ಸಂಸತ್ತಿಗೇ ಹಾಜರಾಗುವ ಅವಕಾಶ ಪಡೆಯದ ಪ್ರಧಾನಿ ಚೌಧರಿ ಚರಣ್ ಸಿಂಗ್

► ಅವಿಶ್ವಾಸ ನಿರ್ಣಯದಲ್ಲಿ ಸೋತು ರಾಜೀನಾಮೆ ನೀಡಿದ ಪ್ರಪ್ರಥಮ ಪ್ರಧಾನಿ ವಿ.ಪಿ. ಸಿಂಗ್

► ಮನಮೋಹನ್ ಸಿಂಗ್ ಪ್ರಪ್ರಥಮ ಸಿಖ್ ಪ್ರಧಾನ ಮಂತ್ರಿ.

► ಸತತ ಎರಡು ಅವಧಿಗೆ ಅಧಿಕಾರದಲ್ಲಿದ್ದ ಪ್ರಪ್ರಥಮ ಕಾಂಗ್ರೆಸೇತರ ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ಹುದ್ದೆಗೇರಿದ ದಕ್ಷಿಣ ರಾಜ್ಯಗಳ ನಾಯಕರೆಂದರೆ ಪಿ.ವಿ. ನರಸಿಂಹರಾವ್ ಮತ್ತು ದೇವೇಗೌಡರು ಮಾತ್ರ.

ಇನ್ನು ಉಪ ಪ್ರಧಾನಿಗಳಾಗಿದ್ದ ನಾಯಕರ ವಿವರಗಳನ್ನು ಗಮನಿಸುವುದಾದರೆ,

1.ವಲ್ಲಭಭಾಯ್ ಪಟೇಲ್ ನೆಹರೂ ಅವಧಿಯಲ್ಲಿ 15 ಆಗಸ್ಟ್ 1947ರಿಂದ 15 ಡಿಸೆಂಬರ್ 1950ರವರೆಗೆ ಹುದ್ದೆಯಲ್ಲಿದ್ದ ಪಟೇಲ್, ಗೃಹ ಸಚಿವರೂ ಆಗಿದ್ದರು.

2.ಮೊರಾರ್ಜಿ ದೇಸಾಯಿ ಇಂದಿರಾ ಅವಧಿಯಲ್ಲಿ 21 ಮಾರ್ಚ್ 1967ರಿಂದ 6 ಡಿಸೆಂಬರ್ 1969ರವರೆಗೆ ಹುದ್ದೆ ನಿರ್ವಹಿಸಿದ್ದರು. ಹಣಕಾಸು ಸಚಿವರೂ ಆಗಿದ್ದರು.

3.ಚೌಧರಿ ಚರಣ್ ಸಿಂಗ್ ಮೊರಾರ್ಜಿ ದೇಸಾಯಿ ಅವಧಿಯಲ್ಲಿ ಈ ಹುದ್ದೆಯಲ್ಲಿದ್ದ ಸಿಂಗ್, ಗೃಹ ಮತ್ತು ಹಣಕಾಸು ಖಾತೆಯನ್ನೂ ನಿಭಾಯಿಸಿದ್ದರು.

4. ಬಾಬು ಜಗಜೀವನ್ ರಾಮ್ ಚರಣ್ ಸಿಂಗ್ ಬಳಿಕ ಮೊರಾರ್ಜಿ ದೇಸಾಯಿ ಅವಧಿಯಲ್ಲಿಯೇ ಉಪ ಪ್ರಧಾನಿಯಾದರು. ರಕ್ಷಣಾ ಖಾತೆ ಹೊಣೆಯನ್ನೂ ಹೊತ್ತಿದ್ದರು.

5.ಯಶವಂತ್ ಚವಾಣ್ ಚರಣ್ ಸಿಂಗ್ ಅವಧಿಯಲ್ಲಿ 28 ಜುಲೈ 1979ರಿಂದ 14 ಜನವರಿ 1980ರವರೆಗೆ ಹುದ್ದೆಯಲ್ಲಿದ್ದರು. ಗೃಹ ಖಾತೆಯನ್ನೂ ಹೊಂದಿದ್ದರು.

6.ದೇವಿಲಾಲ್‌ರವರು ವಿ.ಪಿ. ಸಿಂಗ್ ಮತ್ತು ಚಂದ್ರಶೇಖರ್ ಅವಧಿಯಲ್ಲಿ ಕೃಷಿ ಖಾತೆ ಹೊಣೆ ಹೊತ್ತಿದ್ದು, ಉಪ ಪ್ರಧಾನಿಯಾಗಿದ್ದರು.

7.ಎಲ್.ಕೆ. ಅಡ್ವಾಣಿ ವಾಜಪೇಯಿ ಅವಧಿಯಲ್ಲಿ 5 ಫೆಬ್ರವರಿ 2002ರಿಂದ 22 ಮೇ 2004ರವರೆಗೆ ಹುದ್ದೆಯಲ್ಲಿದ್ದರು. ಗೃಹ ಖಾತೆಯನ್ನೂ ಹೊಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News