ಸುರಪುರ | ದಲಿತ ಸಂಘರ್ಷ ಸಮಿತಿ ಕಚೇರಿ ಉದ್ಘಾಟನೆ

Update: 2024-12-06 13:43 GMT

ಯಾದಗಿರಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿತ ಬಣದ ಸುರಪುರ ತಾಲ್ಲೂಕು ಘಟಕ ಕಚೇರಿ ಉದ್ಘಾಟನೆ ಮಾಡಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಂತರ ನಗರಸಭೆ ಬಳಿಯಲ್ಲಿ ನೂತನವಾಗಿ ತೆರೆಯಲಾಗಿರುವ ಸಂಘಟನೆಯ ಕಚೇರಿ ಉದ್ಘಾಟನೆ ಕಚೇರಿಯನ್ನು ಸಂಘಟನೆ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಉದ್ಘಾಟಿಸಿದರು. ತಾಲ್ಲೂಕು ಸಂಚಾಲಕ ರಮೇಶ ಪೂಜಾರಿ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ ಓಕಳಿ, ರಾಮಪ್ಪ ಕೋರಿ ಹಾಗೂ ಭೀಮಣ್ಣ ವೀರಗೋಟ ನೇರವೇರಿಸಿ, ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿದರು. ನಂತರ ರಾಮಪ್ಪ ಕೋರಿ ಅವರಿಗೆ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಆಯ್ಕೆ ಮಾಡಿ ಆದೇಶ ನೀಡಿದರು.

ಶಹಾಪೂರ ತಾಲ್ಲೂಕು ಸಂಚಾಲಕ ಬಸ್ಸು ನಟೇಕರ್, ಸುರಪುರ ತಾಲ್ಲೂಕು ಮುಖಂಡರಾದ ಅನಿಲ್ ಉಏ, ಚಂದ್ರಾಮ ದಿವಳಗುಡ್ಡ, ಭೀಮಣ್ಣ ಅಡ್ಡೋಡಗಿ, ಶಿವಪ್ಪ ನಾಗರಾಳ, ನಗರ ಘಟಕ ಪದಾಧಿಕಾರಿಗಳಾದ ಗೋಪಾಲ ಗೋಗಿಕೇರಿ, ಮಲ್ಲಪ್ಪ ಕೋಟೆ, ಬೈರಮರಡಿ ಗ್ರಾಮ ಘಟಕ ಪದಾಧಿಕಾರಿಗಳು ಹಾಗೂ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News