ಯಾದಗಿರಿ | ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : ಆನಂದ ವಾಗಮೊಡೆ
ಯಾದಗಿರಿ : ಎಲ್ಲಾ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡುವಂತೆ ಸುರಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಆನಂದ ವಾಗಮೊಡೆ ತಿಳಿಸಿದ್ದಾರೆ.
ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಹೆಲ್ಮೆಟೆ ಧರಿಸುವುದರಿಂದ ನಿಮಗೆ ರಕ್ಷಣೆ ನೀಡಲಿದೆ, ಇದರಿಂದ ಯಾವುದೇ ಅಪಘಾತ ಸಂಭವಿಸಿದರೂ ಜೀವ ಹಾನಿಯಾಗುವುದಿಲ್ಲ. ಅಲ್ಲದೇ ಹೆಲ್ಮೆಟೆ ಧರಿಸುವುದರಿಂದ ಸುರಕ್ಷಾ ಪ್ರಯಾಣ ನಿಮ್ಮದಾಗಲಿದೆ. ಆದ್ದರಿಂದ ಈಗಾಗಲೇ ನ್ಯಾಯಾಲಯದ ಆದೇಶದಂತೆ ಎಲ್ಲಾ ಬೈಕ್ ಸವಾರರು ಮತ್ತು ಹಿಂಬದಿಯ ಸವಾರರು ಇಬ್ಬರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇದನ್ನು ಪಾಲಿಸದಿದ್ದಲ್ಲಿ ಮೊದಲ ಬಾರಿಗೆ ದಂಡ ಹಾಕಲಾಗುವುದು. ಪದೇ ಪದೇ ನಿಯಮ ಉಲ್ಲಂಘಿಸಿದಲ್ಲಿ ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದಾಗುವ ಸಾಧ್ಯತೆ ಇರುತ್ತದೆ. ಇದಕ್ಕಿಂತ ಮುಖ್ಯವಾಗಿ ನಿಮ್ಮ ರಕ್ಷಣೆ ನಿಮ್ಮ ಹೆಲ್ಮೆಟ್ ನಲ್ಲಿರಲಿದೆ. ಆದ್ದರಿಂದ ಎಲ್ಲಾ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೆ ಬಂದಿದ್ದ ಬೈಕ್ ಸವಾರರಿಗೆ ದಂಡದ ಬದಲು ಅದೇ ಹಣದಲ್ಲಿ ಹೆಲ್ಮೆಟ್ ತೆಗೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಗಳಾದ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ, ಎಚ್.ಸಿ ದೊಡ್ಡನಗೌಡ, ಮಲ್ಕಾರಿ, ಪೊಲೀಸ್ ಪೇದೆಗಳಾದ ಲಕ್ಕಪ್ಪ, ದಯಾನಂದ ಜಮಾದಾರ್, ಕೆಂಚಪ್ಪ, ಸುರೇಶ ಕದಂ, ಆನಂದ, ಆಂಜನೇಯ, ಸೇರಿದಂತೆ ಅನೇಕರು ಭಾಗವಹಿಸಿದ್ದರು.