ದೇವಸ್ಥಾನ, ದೇವರು ಭಾರತೀಯ ಸಂಸ್ಕೃತಿಯ ಪ್ರತೀಕ : ಶಾಸಕ ತುನ್ನೂರು

ಯಾದಗಿರಿ : ದೇವಸ್ಥಾನ, ದೇವರು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ವಾರ್ಡ ನಂ.9 ರ ಕೋಲಿವಾಡ ಬಡಾವಣೆಯಲ್ಲಿ ಗುರುವಾರ ಮಶೆಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ ಶಾಸಕರು ಮಾತನಾಡಿದರು.
ಜಗತ್ತಿನ ಯಾವ ದೇಶದಲ್ಲಿ ಇರದ ಧಾರ್ಮಿಕ ಆಚರಣೆಗಳು ನಮ್ಮಲಿವೆ. ಇದಕ್ಕೆ ಜನರ ನಂಬಿಕೆ ಮತ್ತು ಹಿರಿಯರು ಅನಾಧಿ ಕಾಲದಿಂದಲೂ ಆಚರಿಸುತ್ತಾ ಬಂದಿರುವ ವಿಧಾನಗಳೇ ಪ್ರಮುಖ ಕಾರಣವಾಗಿವೆ ಎಂದು ಶಾಸಕರು ವಿವರಿಸಿದರು.
ಬಿಜೆಪಿ ಯುವ ನಾಯಕ ಮಹೇಶ ರಡ್ಡಿ ಮುದ್ನಾಳ್ ಮಾತನಾಡಿ, ನಾವು ಎಷ್ಠೆ ಮುಂದುವರೆದರೂ ಧರ್ಮಾಚರಣೆ ಬೇಕು, ಇದರಿಂದ ಮಾನಸಿಕ ಒತ್ತಡ ಕಡಿಮೆ ಆಗಿ ಮನುಷ್ಯ ತನ್ನ ಯಶಸ್ಸಿನ ದಾರಿಗೆ ಹೊಗಬಲ್ಲ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ದಾಸಬಾಳಧೀಶ್ವರ ಮಠದ ಶ್ರೀಗಳಾದ ವೀರೇಶ್ವರ ಸ್ವಾಮಿಗಳು, ನಮ್ಮ ಈ ಸಗರ ನಾಡು ಶರಣರ, ಸಂತರ ಮತ್ತು ದೇವತೆಗಳ ಬೀಡಾಗಿದೆ. ಪ್ರತಿಯೊಬ್ಬರ ಬದುಕು ಹಸನಾಗಿ ನಡೆಯಲು ನಂಬಿದ ದೇವರ ಮೊರೆ ಹೊಗಲೇಬೇಕು, ಆಗಲೇ ಅವರಿಗೆ ಯಶಸ್ಸಿಯ ಮೆಟ್ಟಿಲು ಹತ್ತಲು ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಏಕದಂಡಗಿ ಮಠದ ಶ್ರೀಗಳಾ ಕುಮಾರ ಸ್ವಾಮಿ, ನಿಜಲಿಂಗಪ್ಪ ದಾಸನೋರ, ಸಾಬಣ್ಣ ಪೂಜಾರಿ , ಮಲ್ಲಪ್ಪ ಮುತ್ಯಾ ಕುಂಬಾರ್, ನಗರಸಭೆ ಸದಸ್ಯರಾದ ಚನ್ನಕೇಶವಗೌಡ ಬಾಣತಿಹಾಳ, ಪ್ರಭಾವತಿ ಮಾರುತಿ ಕಲಾಲ್, ಎಮ್ ಕೆ ಬಿರನೂರ್, ಶರಣಪ್ಪ ಅಂಬಿಗೇರ, ಭೀಮರಾಯ ಪೂಜಾರಿ, ಸಾಬಣ್ಣ ಪೂಜಾರಿ, ಮಲ್ಲಿಕಾರ್ಜುನ ಗೋಸಿ,ಶಂಕರ ಗೋಸಿ, ಸಾಬಣ್ಣ ಸುಣಗಾರ್, ಜಗದೀಶ ಗೋಸಿ, ಸಾಬಣ್ಣ ಬಾವೂರ್, ಮಲ್ಲಯ್ಯ ಕಸಬಿ ಸೇರಿದಂತೆ ಮತ್ತಿತರರು ಇದ್ದರು.