ಅಬ್ಬಬ್ಬಾ, ಈ ಪದಗಳು
ಪದಗಳನ್ನು
ಬಳಸಲಾಗುತ್ತದೆ, ಬರೆಯಲಾಗುತ್ತದೆ, ಓದಲಾಗುತ್ತದೆ,
ನುಡಿಯಲಾಗುತ್ತದೆ, ರಚಿಸಲಾಗುತ್ತದೆ, ರೂಪಿಸಲಾಗುತ್ತದೆ,
ಸಂಘಟಿಸಲಾಗುತ್ತದೆ, ಸಂಯೋಜಿಸಲಾಗುತ್ತದೆ, ಅಳೆಯಲಾಗುತ್ತದೆ, ತೂಗಲಾಗುತ್ತದೆ, ಆರಿಸಲಾಗುತ್ತದೆ, ಹಾಡಲಾಗುತ್ತದೆ,
ಹಾಗೆಯೇ ....
ಪದಗಳು
ಸಿದ್ಧವಾಗುತ್ತವೆ, ಸುಂದರವಾಗುತ್ತವೆ, ಅಲಂಕೃತವಾಗುತ್ತವೆ,
ಉಕ್ಕುತ್ತವೆ, ಚಲಿಸುತ್ತವೆ, ರಂಜಿಸುತ್ತವೆ, ರಮಿಸುತ್ತವೆ
ನಮಿಸುತ್ತವೆ, ನಗಿಸುತ್ತವೆ, ಪ್ರೀತಿ ಉಕ್ಕಿಸುತ್ತವೆ, ಸಾಂತ್ವನ ನೀಡುತ್ತವೆ,
ಸಾಲದ್ದಕ್ಕೆ ....
ಪದಗಳು
ಮುನಿಯುತ್ತವೆ, ಬೇಸರಿಸುತ್ತವೆ, ಅಣಕಿಸುತ್ತವೆ, ಕೆಣಕುತ್ತವೆ,
ಚುಚ್ಚುತ್ತವೆ, ತಿವಿಯುತ್ತವೆ, ಕೆರಳಿಸುತ್ತವೆ, ಉದ್ರೇಕಿಸುತ್ತವೆ,
ಪ್ರಚೋದಿಸುತ್ತವೆ, ನೋಯಿಸುತ್ತವೆ, ಘಾಸಿಗೊಳಿಸುತ್ತವೆ,
ಅಳು ಬರಿಸುತ್ತವೆ, ಕಂಬನಿ ತರುತ್ತವೆ,
ಆದರೆ .....
ಪದಗಳು
ಅಳಿಯುವುದಿಲ್ಲ, ದಣಿಯುವುದಿಲ್ಲ, ವಿರಮಿಸುವುದಿಲ್ಲ
ಆದ್ದರಿಂದ .......
ಪದಗಳನ್ನು
ಪ್ರೀತಿಸಿ, ಗುರುತಿಸಿ, ಗೌರವಿಸಿ, ಪದಗಳ ಶಕ್ತಿಯನ್ನು ಊಹಿಸಿ, ಪದಗಳ ಘನತೆಯನ್ನು ಉಳಿಸಿ, ಪದಗಳ ಗೌರವ ಬೆಳೆಸಿ,
ಪದಗಳನ್ನು ಸೂಕ್ತ ಸನ್ನಿವೇಶದಲ್ಲಿ ಬಳಸಿ, ಉಪಯುಕ್ತವಾಗಿಸಿ ಬಳಸಿ, ಸಂವೇದನಾಶೀಲವಾಗಿ ಬಳಸಿ,
ಪದಗಳಿಗೆ ಹೊಸರೂಪಗಳನ್ನು ನೀಡಿ, ಪದಗಳ ವಿವಿಧ ಆಯಾಮಗಳನ್ನು ಹೊರತನ್ನಿ, ಪದಗಳನ್ನು ಹೊಸ ಎತ್ತರಕ್ಕೆ ತಲುಪಿಸಿ
ಪದಗಳ ಆಳವನ್ನು ಗ್ರಹಿಸಿ, ಪದಗಳ ವ್ಯಾಪ್ತಿಯನ್ನು ವಿಸ್ತರಿಸಿ, ಪದಗಳ ಹಿಂದಿನ ಸೂಕ್ಷ್ಮಗಳನ್ನು ಗಮನಿಸಿ,
ಎಂದೆಂದೂ....
ಪದಗಳ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು, ಪದಗಳ ದುರ್ಬಳಕೆ ಸಲ್ಲದು, ಪದಗಳ ಜೊತೆ ಚೆಲ್ಲಾಟ ಸಲ್ಲದು,
ಪದಗಳ ಶೋಷಣೆ ಸಲ್ಲದು, ಪದಗಳ ಮೇಲೆ ಅಕ್ರಮ ಸಲ್ಲದು,
ಉರ್ದು ಮೂಲದಿಂದ ಸಂಗ್ರಹ,
ಸಂಪಾದನೆ ಮತ್ತು ಅನುವಾದ :
ಹುಸ್ನಾ ಪುತ್ತಿಗೆ