ಒಲಿದ ಸ್ವರಗಳು
ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಶಿವಸುಂದರ್ ಅವರದು ಹೋರಾಟದ ಬದುಕು. ನಾಡಿನ ಪ್ರಖರ ಚಿಂತಕ, ಬರಹಗಾರರಾಗಿ ಗುರುತಿಸಿಕೊಂಡಿರುವ ಇವರು, ವಾರ್ತಾಭಾರತಿ ಪತ್ರಿಕೆಯ ‘ಅಂಕಣ ಬರಹಗಳು’ ಮತ್ತು ‘ಸಮಕಾಲೀನ’ ವೀಡಿಯೋ ರಾಜಕೀಯ ವಿಶ್ಲೇಷಣೆಗಳ ಮೂಲಕ ಚಿರಪರಿಚಿತರಾಗಿದ್ದಾರೆ. ಕವಿತೆಗಳ ಮೂಲಕವೂ ತನ್ನ ನಿಲುವುಗಳನ್ನು, ಆಶಯಗಳನ್ನು ಸ್ಪಷ್ಟಪಡಿಸುತ್ತಾ ಬಂದಿದ್ದಾರೆ. ಗೌರಿ ಲಂಕೇಶ್ ವಾರಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ‘ಚಾರ್ವಾಕ’ ಅಂಕಣ ಕೃತಿ ರೂಪದಲ್ಲಿ ಹೊರ ಬಂದಿದೆ. ಆನಂದ್ ತೇಲ್‌ತುಂಬ್ಡೆ ಅವರ ‘ಖೈರ್ಲಾಂಜಿ’ ಕೃತಿಯ ಅನುವಾದವನ್ನು ಅವರು ಸಂಯೋಜಿಸಿದ್ದಾರೆ.
ಅರುಹಾಗದ ಅಂತಃಕರಣ
ಬುದ್ಧನನ್ನು
ಬರಿದೆ ಬಟ್ಟೆಯಾಗಿಸಿಕೊಂಡ ಭಿಕ್ಕುಗಳು
ಸಿಂಹಳದಲ್ಲಿ ನರಮೇಧ ನಡೆಸಿದರು...
ಬಸವನನ್ನು
ಲಿಂಗವಾಗಿಸಿದವರು
ಅಮಾನುಷ ವೈದಿಕ ಸಾಮ್ರಾಜ್ಯದ
ಸಾಮಂತರಾದರು...
ಅಂಬೇಡ್ಕರ್‌ರನ್ನು
ಮಂತ್ರವಾಗಿಸಿದವರು
ಹಂಚಿ ತಿನ್ನಲು ಒಲ್ಲದೆ ಹೊಂಚಿ ಕೊಲ್ಲುವವರ
ಕಾಲಾಳುಗಳಾದರು...
ಅರಿವೆಂಬುದು
ಅರುಹಾಗದೆ...
ಕುರುಹಿನ ಮೋಹವಾದಲ್ಲಿ...
ತಿಳಿವೆಂಬುದು
ಎದೆಗಿಳಿಯದೆ
ಗದ್ದುಗೆಯ ದಾರಿಯಾದಲ್ಲಿ ...
ಬುದ್ಧ ಬಸವ ಅಂಬೇಡ್ಕರರು
ಕೂಡ
ಹೊಸ ಸಂಘವ ಕಟ್ಟಬೇಕು
ನಿಜ ನಿರ್ವಾಣಕ್ಕಾಗಿ
ಅಂತರಂಗ ಬಹಿರಂಗಗಳ
ನವ ಬಂಡಾಯ ಹೂಡಬೇಕು..
***
ಕುಸಿಯದಿರು ಮನವೇ ಕಂಗೆಡದಿರು..
ತಲ್ಲಣಿಸದಿರು ಮನವೇ
ದಣಿಯಬೇಡ
ಕಂಗೆಡದಿರು ಮನವೇ
ಕುಸಿಯಬೇಡ
ಬೆಳಕಿನ ಬೇಸಾಯ ನಿಂತಾಗ
ಅನಂತವೆನಿಸುತ್ತದೆ
ಆವರಿಸಿದ ಇರುಳು
ಅರಿವಿನ ಕುಲುಮೆ ನಿಂತಾಗ
ಕೊಲ್ಲುವನೇ ಕಾಯ್ವನೆಂಬ ಮರುಳು...
ದೇವನೇ ದೇಶವಾದಮೇಲೆ
ಭಕ್ತರಲ್ಲದವರು ನಾಗರಿಕರಲ್ಲ
ರಾಮನೆ ರಾಷ್ಟ್ರವಾದಾಗ
ಸೀತೆ ಶಂಭುಕರ ವನವಾಸ ತಪ್ಪಿದ್ದಲ್ಲ
ಕಾಲಿಗೆ ಬಿದ್ದ ಪೆಟ್ಟು
ಮೆದುಳಿಗೆ ತಲುಪದ ತನಕ..
ಮನಮನದ ಮಿಥಿಲೆಯಲ್ಲಿ
ಮಯಕದಲ್ಲಿರುವ ಶಂಭುಕರು
ತಿಳಿದೇಳದ ತನಕ
ನಿಶ್ಚಿತ ನೂರು ಸೋಲುಗಳೆಲ್ಲಾ
ನಿರ್ದಯೀ ಪಾಠಶಾಲೆಗಳೇ
ಅರ್ಹವಲ್ಲದ ಗೆಲುವುಗಳೆಲ್ಲಾ
ಮಯಕದ ಮಧುಶಾಲೆಗಳೇ
***
ಈ ಯುದ್ಧದಲ್ಲಿ ನೀನು ಯಾರ ಪರ?
ಈ ಯುದ್ಧದಲ್ಲಿ ನೀನು
ಯಾರ ಪರ?
ಸದಾ ಸಮರ ಸನ್ನದ್ಧರಾದ
ಗೆಳೆಯರೊಬ್ಬರು ಕೇಳಿದರು..
ನಾನು ಸದಾ ಶಾಂತಿಯ ಪರ
ಎಂದು ಹೇಳಿದೊಡನೆ...
ಸಿಟ್ಟಿಗೆದ್ದ ಗೆಳೆಯರು
ಬಡಿವಾರದ ಮಾತು ಬೇಡ
ಸದ್ಯ ಯುದ್ಧ ಜಾರಿಯಲ್ಲಿದೆ
ನೀನು ಯಾವ ಬಣ
ಎಂದು ಅಬ್ಬರಿಸಿದರು..
ನಾನು ಹೇಳಿದೆ ತಣ್ಣಗೆ..
ಯುದ್ಧ ಶುರುವಾಗಿದ್ದರೆ
ನಾನು ಯುದ್ಧ ನಿಲ್ಲಿಸುವ ಪರ..
ಯುದ್ಧ ಕಾರಣ ತಿಳಿಸದೆ
ಬಣದ ಕುರುಡು ಬೆಳೆಸುವುದು
ಕುಟಿಲ ರಾಜಕಾರಣ..
ದೇಶದೇಶಗಳ ನಡುವೆ
ಯುದ್ಧವಾದರೆ
ನಾನು ಎರಡೂ ದೇಶಗಳ
ಜನರ ಪರ
ಪಶ್ಚಿಮದ ಅರಮನೆ ಹಾಗೂ
ಪೂರ್ವದ ಸುರಮನೆಗಳ
ನಡುವೆ ಯುದ್ಧವಾದರೆ
ನಾನು
ಜಗತ್ತಿನ ಗುಡಿಸಲುಗಳ ಬಣ..
ಪ್ರಕಟ ದುರಾಕ್ರಮಣ
ಕುಟಿಲ ಅತಿಕ್ರಮಣಗಳ
ನಡುವಿನ ಯುದ್ಧವಾದರೆ
ನಾನು
ಸ್ವಾಯತ್ತ ಸ್ವಾತಂತ್ರ್ಯದ ಬಣ..
ಸ್ಮಶಾನ ಮೌನ ಹಾಗೂ
ಅಬ್ಬರದ ಆಕ್ರಮಣಗಳ
ನಡುವೆ ನಾನು
ನಿಜದ ಸಮಾಧಾನದ ಬಣ
ಜಗತ್ತಿನ ಕುಬೇರರ
ಪಾಲುಜಗಳದಲ್ಲಿ
ನಾನು
ಲೂಟಿಯಾಗುವ ಜನರ ಬಣ...
ಕಾರಣ ಯುದ್ಧವೆಂದರೆ
ರಕ್ತಸಿಕ್ತ ರಾಜಕಾರಣ
ರಾಜಕೀಯವೆಂದರೆ
ರಕ್ತರಹಿತ ಯುದ್ಧಕೋರಣ
ಆದ್ದರಿಂದ ಗೆಳೆಯ..
ಬಣ್ಣ ಬಳಿದುಕೊಳ್ಳುವ ಮುನ್ನ
ಕೇಳು ಕಾರಣ
ಸಾಯುವ ಮುನ್ನ ತಿಳಿದಿಕೋ
ಯಾರಿಗೀ ಬಲಿದಾನ..
ಗೆಳೆಯರಿಗೇಕೋ
ಸಮಾಧಾನವಾಗಲಿಲ್ಲ
***
ಉಮರ್ ಖಾಲಿದ್ ಎಂಬ ಇಂಕ್ವಿಲಾಬಿ
ಬೆಳಕನ್ನು ಬಂಧಿಸಿದರೆ
ಹಗಲಾಗದೆನ್ನುವ
ಇರುಳ ಪಹರಿಗಳೇ ಕೇಳಿ
ಉಮರ್ ಖಾಲಿದ್ ಎಂದರೆ
ಕತ್ತಲ ಆಗಸವ ಬೆಳಗುವ
ಭರವಸೆಯ ನಕ್ಷತ್ರ
ಸಾವಿನಂತ ನೋವುಣ್ಣುತ್ತಲೇ
ಜೀವ ಪೊರೆವ ತಾಯ
ಹೆರಿಗೆ ಮುಕ್ಕು ..
ಹೊರಗಿನ ಕತ್ತಲು
ಒಳಗಿಳಿಯದಂತೆ ಕಾಯ್ವ
ಬದ್ಧತೆಯ ಹಣತೆ
ಸುಳ್ಳುಗಳ ಅತಿಕ್ರಮಣ
ತಡೆವ
ಸತ್ಯದ ಗಡಿರೇಖೆ...
ಅದಕೆಂದೆ..
ಉಮರ್ ಖಾಲಿದ್ ನನ್ನು
ನೆನೆಯುವುದೆಂದರೆ
ಮರೆವಿನ ವಿರುದ್ಧ
ನೆನಪಿನ ಯುದ್ಧದ ಮುಂದುವರಿಕೆ..
ಸಂಘಟಿತ ದ್ವೇಷದ
ವಿರುದ್ಧ
ಪ್ರೀತಿಯ ಹಪಾಹಪಿಕೆ..
ಅಸಹಾಯಕತೆ, ಹತಾಶೆ,
ಭ್ರಾಂತಿಗಳ ವಿರುದ್ಧ...
ನೈತಿಕ ಎಚ್ಚರದ ಕಾಣ್ಕೆ ..
ಹೌದು
ಉಮರ್ ಖಾಲಿದ್
ಸುಳ್ಳಿನ ಸಾಮ್ರಾಜ್ಯಕೆ
ಸಡ್ಡು ಹೊಡೆದ
ಭಯೋತ್ಪಾದಕ...
ದ್ವೇಷದ ಕೋಟೆಯಲ್ಲಿ
ಪ್ರೀತಿಯ ಸ್ಫೋಟಕ
ಅಡಗಿಸಿಟ್ಟ ದ್ವೇಷದ್ರೋಹಿ...
ಸುಳ್ಳಿನ ಸಂದೂಕದಲ್ಲಿ
ಸತ್ಯದ ಕಿಡಿಯನ್ನು ಬಚ್ಚಿಟ್ಟ
ವಿಫಲ ಸಂಚುಕೋರ..
ಇರುಳ ದೊರೆಗಳೇ...
ಇಗೋ ಬರೆದುಕೊಳ್ಳಿ
ನನ್ನ ಹೆಸರನ್ನೂ..
ಉಮರನ ಪಕ್ಕದಲ್ಲಿ
ಭಯೋತ್ಪಾದಕರ ಪಟ್ಟಿಯಲ್ಲಿ
ನನ್ನ ಹೆಸರು ಶಿವಸುಂದರ
ನಾನು ಉಮರನ ಒಕ್ಕಲು
ಉಮರ್ ಖಾಲಿದ್ ಎಂಬ ಇಂಕ್ವಿಲಾಬಿ
ಬೆಳಕನ್ನು ಬಂಧಿಸಿದರೆ
ಹಗಲಾಗದೆನ್ನುವ
ಇರುಳ ಪಹರಿಗಳೇ ಕೇಳಿ
ಉಮರ್ ಖಾಲಿದ್ ಎಂದರೆ
ಕತ್ತಲ ಆಗಸವ ಬೆಳಗುವ
ಭರವಸೆಯ ನಕ್ಷತ್ರ
ಸಾವಿನಂತ ನೋವುಣ್ಣುತ್ತಲೇ
ಜೀವ ಪೊರೆವ ತಾಯ
ಹೆರಿಗೆ ಮುಕ್ಕು ..
ಹೊರಗಿನ ಕತ್ತಲು
ಒಳಗಿಳಿಯದಂತೆ ಕಾಯ್ವ
ಬದ್ಧತೆಯ ಹಣತೆ
ಸುಳ್ಳುಗಳ ಅತಿಕ್ರಮಣ
ತಡೆವ
ಸತ್ಯದ ಗಡಿರೇಖೆ...
ಅದಕೆಂದೆ..
ಉಮರ್ ಖಾಲಿದ್ ನನ್ನು
ನೆನೆಯುವುದೆಂದರೆ
ಮರೆವಿನ ವಿರುದ್ಧ
ನೆನಪಿನ ಯುದ್ಧದ ಮುಂದುವರಿಕೆ..
ಸಂಘಟಿತ ದ್ವೇಷದ
ವಿರುದ್ಧ
ಪ್ರೀತಿಯ ಹಪಾಹಪಿಕೆ..
ಅಸಹಾಯಕತೆ, ಹತಾಶೆ,
ಭ್ರಾಂತಿಗಳ ವಿರುದ್ಧ...
ನೈತಿಕ ಎಚ್ಚರದ ಕಾಣ್ಕೆ ..
ಹೌದು
ಉಮರ್ ಖಾಲಿದ್
ಸುಳ್ಳಿನ ಸಾಮ್ರಾಜ್ಯಕೆ
ಸಡ್ಡು ಹೊಡೆದ
ಭಯೋತ್ಪಾದಕ...
ದ್ವೇಷದ ಕೋಟೆಯಲ್ಲಿ
ಪ್ರೀತಿಯ ಸ್ಫೋಟಕ
ಅಡಗಿಸಿಟ್ಟ ದ್ವೇಷದ್ರೋಹಿ...
ಸುಳ್ಳಿನ ಸಂದೂಕದಲ್ಲಿ
ಸತ್ಯದ ಕಿಡಿಯನ್ನು ಬಚ್ಚಿಟ್ಟ
ವಿಫಲ ಸಂಚುಕೋರ..
ಇರುಳ ದೊರೆಗಳೇ...
ಇಗೋ ಬರೆದುಕೊಳ್ಳಿ
ನನ್ನ ಹೆಸರನ್ನೂ..
ಉಮರನ ಪಕ್ಕದಲ್ಲಿ
ಭಯೋತ್ಪಾದಕರ ಪಟ್ಟಿಯಲ್ಲಿ
ನನ್ನ ಹೆಸರು ಶಿವಸುಂದರ
ನಾನು ಉಮರನ ಒಕ್ಕಲು
ಉಮರ್ ಖಾಲಿದ್ ಎಂಬ ಇಂಕ್ವಿಲಾಬಿ
ಬೆಳಕನ್ನು ಬಂಧಿಸಿದರೆ
ಹಗಲಾಗದೆನ್ನುವ
ಇರುಳ ಪಹರಿಗಳೇ ಕೇಳಿ
ಉಮರ್ ಖಾಲಿದ್ ಎಂದರೆ
ಕತ್ತಲ ಆಗಸವ ಬೆಳಗುವ
ಭರವಸೆಯ ನಕ್ಷತ್ರ
ಸಾವಿನಂತ ನೋವುಣ್ಣುತ್ತಲೇ
ಜೀವ ಪೊರೆವ ತಾಯ
ಹೆರಿಗೆ ಮುಕ್ಕು ..
ಹೊರಗಿನ ಕತ್ತಲು
ಒಳಗಿಳಿಯದಂತೆ ಕಾಯ್ವ
ಬದ್ಧತೆಯ ಹಣತೆ
ಸುಳ್ಳುಗಳ ಅತಿಕ್ರಮಣ
ತಡೆವ
ಸತ್ಯದ ಗಡಿರೇಖೆ...
ಅದಕೆಂದೆ..
ಉಮರ್ ಖಾಲಿದ್ ನನ್ನು
ನೆನೆಯುವುದೆಂದರೆ
ಮರೆವಿನ ವಿರುದ್ಧ
ನೆನಪಿನ ಯುದ್ಧದ ಮುಂದುವರಿಕೆ..
ಸಂಘಟಿತ ದ್ವೇಷದ
ವಿರುದ್ಧ
ಪ್ರೀತಿಯ ಹಪಾಹಪಿಕೆ..
ಅಸಹಾಯಕತೆ, ಹತಾಶೆ,
ಭ್ರಾಂತಿಗಳ ವಿರುದ್ಧ...
ನೈತಿಕ ಎಚ್ಚರದ ಕಾಣ್ಕೆ ..
ಹೌದು
ಉಮರ್ ಖಾಲಿದ್
ಸುಳ್ಳಿನ ಸಾಮ್ರಾಜ್ಯಕೆ
ಸಡ್ಡು ಹೊಡೆದ
ಭಯೋತ್ಪಾದಕ...
ದ್ವೇಷದ ಕೋಟೆಯಲ್ಲಿ
ಪ್ರೀತಿಯ ಸ್ಫೋಟಕ
ಅಡಗಿಸಿಟ್ಟ ದ್ವೇಷದ್ರೋಹಿ...
ಸುಳ್ಳಿನ ಸಂದೂಕದಲ್ಲಿ
ಸತ್ಯದ ಕಿಡಿಯನ್ನು ಬಚ್ಚಿಟ್ಟ
ವಿಫಲ ಸಂಚುಕೋರ..
ಇರುಳ ದೊರೆಗಳೇ...
ಇಗೋ ಬರೆದುಕೊಳ್ಳಿ
ನನ್ನ ಹೆಸರನ್ನೂ..
ಉಮರನ ಪಕ್ಕದಲ್ಲಿ
ಭಯೋತ್ಪಾದಕರ ಪಟ್ಟಿಯಲ್ಲಿ
ನನ್ನ ಹೆಸರು ಶಿವಸುಂದರ
ನಾನು ಉಮರನ ಒಕ್ಕಲು
ವಿಳಾಸ ವಿಶಾಲ ಬಯಲು...
****