ಬಿ.ಸಿ.ರೋಡ್: ಪಿಸಿಎಆರ್‌ಡಿ ಬ್ಯಾಂಕ್‌ನಲ್ಲಿ 10 ದಿನಗಳ ಆಧಾರ್ ಶಿಬಿರ

Update: 2024-10-01 14:26 GMT

ಬಿ.ಸಿ.ರೋಡ್, ಅ.1: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ನಿ. ಬಿ.ಸಿ.ರೋಡ್ ಶಾಖೆ, ಬಂಟ್ವಾಳ ತಾಲೂಕು ಹಾಗೂ ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ವತಿಯಿಂದ ಅ.4ರಿಂದ 14ರ ತನಕ ಆಧಾರ್ ಶಿಬಿರ ಬಿ.ಸಿ.ಡೋರ್ ಪದ್ಮಾ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಪಿಸಿಎಆರ್‌ಡಿ (ಎಲ್‌ಡಿ) ಬ್ಯಾಂಕ್ ಕಟ್ಟಡದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಹೊಸ ಆಧಾರ್ ಕಾರ್ಡ್, ಹೆಸರು, ಜನ್ಮ ದಿನಾಂಕ, ಲಿಂಗ, ಮೊಬೈಲ್ ನಂಬರ್, ಇಮೇಲ್ ಐಡಿ, ವಿಳಾಸ ತಿದ್ದುಪಡಿ, ಫೋಟೊ ಅಪ್ಡೇಟ್, ಮಕ್ಕಳ 5 ವರ್ಷದ ಮತ್ತು 15 ವರ್ಷದ ಅಪ್ಡೇಟ್, ಪ್ರತಿ 10 ವರ್ಷಕ್ಕೊಮ್ಮೆ ಮಾಡಿ ಕೊಳ್ಳುವ ಅಪ್ಡೇಟ್‌ಗಳನ್ನು ಮಾಡಿಕೊಡಲಾಗುವುದು.

ಮಕ್ಕಳ ಆಧಾರ್ ಮಾಡಿಸಿದರೆ ಮಗುವಿಗೆ 5 ವರ್ಷ ತುಂಬಿದ ನಂತರ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. ನಂತರ ಮಗುವಿಗೆ 15 ವರ್ಷ ತುಂಬಿದ ಕೂಡಲೇ ಬಯೋಮೆಟ್ರಿಕ್ ಅಪ್ಡೇಡ್ ಮಾಡಿಸಿಕೊಳ್ಳಬೇಕು. 15 ವರ್ಷದ ಅಪ್ಡೇಟ್ ನಂತರ ಪ್ರತಿಯೊಬ್ಬರೂ 10 ವರ್ಷಕ್ಕೊಮ್ಮೆ ಆಧಾರ್ ಬಯೋಮೆಟ್ರಿಕ್/ಪೋಟೊ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಆಧಾರ್ ಅಪ್ಡೇಟ್ ಮಾಡಿಕೊಳ್ಳದಿದ್ದರೆ ಸರಕಾರಿ ಸವಲತ್ತು ಪಡೆಯಲು, ಆಸ್ತಿ ನೋಂದಣಿ ಮಾಡಿಸಲು, ಬ್ಯಾಂಕ್ ವ್ಯವಹಾರ ನಡೆಸಲು ಮತ್ತು ನಮ್ಮ ವೈಯಕ್ತಿದ ದಾಖಲೆಗಳನ್ನು ಮಾಡಿಸಲು ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಬ್ಯಾಂಕ್‌ನಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಆಧಾರ್ ಅಪ್ಡೇಟ್ ಮಾಡಿಕೊಳ್ಳದಿದ್ದಲ್ಲಿ ಆಧಾರ್ ನಿಷ್ಕ್ರೀಯ/ರದ್ದುಗೊಳ್ಳುವ ಸಾಧ್ಯತೆಗಳೂ ಇರುತ್ತದೆ. ಹಾಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ನಿ. ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News