ಕೆಪಿಎಸ್ಸಿ ಪರೀಕ್ಷೆ: 1866 ಅಭ್ಯರ್ಥಿಗಳು ಗೈರು

Update: 2024-12-29 15:32 GMT

ಮಂಗಳೂರು, ಡಿ.29: ಕರ್ನಾಟಕ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜಿಲ್ಲೆಯ 3 ಕೇಂದ್ರಗಳಲ್ಲಿ ರವಿವಾರ ಸುಸೂತ್ರವಾಗಿ ನಡೆಯಿತು.

1,445 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದರು. ಬೆಳಗ್ಗೆ ನಡೆದ ಮೊದಲ ಪತ್ರಿಕೆಯ ಪರೀಕ್ಷೆಗೆ 514 ಮಂದಿ ಹಾಜರಾಗಿ, 931 ಮಂದಿ ಗೈರು ಹಾಜರಾಗಿದ್ದರು. ಅಪರಾಹ್ನ ನಡೆದ 2ನೇ ಪತ್ರಿಕೆಯ ಪರೀಕ್ಷೆಗೆ 510 ಮಂದಿ ಹಾಜರಾಗಿದ್ದರೆ 935 ಗೈರು ಹಾಜರಾಗಿದ್ದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್‌ಸ್ಟ್ರೀಟ್ ಹಾಗೂ ಬಲ್ಮಠ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಿತು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಭ್ಯರ್ಥಿಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. ದ.ಕ. ಜಿಲ್ಲಾಧಿಕಾರಿ ಮುಲ್ಮೈ ಮುಹಿಲನ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News