ಬಂಟ್ವಾಳ: 'ನೆತ್ತರಕೆರೆ' ಸಿನೆಮಾ ಸೆಟ್ ನಲ್ಲಿ ಬೆಂಕಿ ಅವಘಡ
Update: 2025-01-28 12:54 IST

ಸಾಂದರ್ಭಿಕ ಚಿತ್ರ
ಬಂಟ್ವಾಳ: 'ನೆತ್ತರಕೆರೆ' ಸಿನೆಮಾ ಚಿತ್ರೀಕರಣದ ವೇಳೆ ಸೆಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.
ತುಳು ಮತ್ತು ಕನ್ನಡ ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಸಿನೆಮಾದ ಚಿತ್ರೀಕರಣ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ನಡೆಯುತ್ತಿದೆ. ಇಲ್ಲಿ ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗಿತ್ತು. ಈ ಸೆಟ್ ನ ಅಡುಗೆ ಕೋಣೆಯಲ್ಲಿ ಇಂದು ಬೆಳಗ್ಗೆ ಆಕಸ್ಮಿವಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ತಕ್ಷಣ ಚಿತ್ರತಂಡವು ಟ್ಯಾಂಕರ್ ಮೂಲಕ ನೀರು ತಂದು ಬೆಂಕಿಯನ್ನು ನಂದಿಸಿದೆ. ಆದರೆ ಅಷ್ಟರಲ್ಲಿ ಸೆಟ್ ನ ಒಂದು ಭಾಗ ಬೆಂಕಿಯಿಂದ ಹಾನಿಗೀಡಾಗಿದೆ ಎಂದು ತಿಳಿದುಬಂದಿದೆ.
'ನೆತ್ತರಕೆರೆ' ಕಾಂತಾರ ಸಿನೆಮಾದಲ್ಲಿ ‘ಗುರುವ’ ಪಾತ್ರದಲ್ಲಿ ನಟಿಸಿರುವ ಸ್ವರಾಜ್ ಶೆಟ್ಟಿ ನಟನೆಯ ಚಿತ್ರ. ಇದರ ಚಿತ್ರಕಥೆ ಹಾಗೂ ನಿರ್ದೇಶನ ಕೂಡ ಅವರೇ ಮಾಡುತ್ತಿದ್ದಾರೆ.