ಸುರತ್ಕಲ್: ಉಷಾ ಅವರಿಗೆ ಪಿಎಚ್ ಡಿ ಪದವಿ
Update: 2025-03-21 14:46 IST

ಕೊಣಾಜೆ: ಉಷಾ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾದ ಪ್ರೊ. ನಾಗಪ್ಪ ಗೌಡ ರವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ "ಉತ್ತರ ರಾಮಾಯಣ ಆಧಾರಿತ ಕನ್ನಡ ಕಾವ್ಯಗಳಲ್ಲಿ: ಸೀತೆ " ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿಯನ್ನು ನೀಡಿದೆ.
ಪ್ರಸ್ತುತ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಇವರು ಸುರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮದ ನಿವೃತ್ತ ಎನ್. ಎಂ. ಪಿ. ಟಿ. ಉದ್ಯೋಗಿ ಪದ್ಮನಾಭ ಪೂಜಾರಿ ಹಾಗೂ ರತ್ನ ದಂಪತಿಯ ಪುತ್ರಿ. ಪೆರ್ಮುದೆ ಮುಕ್ಕೋಡಿ ಲಕ್ಷ್ಮಣ ಪೂಜಾರಿ ಹಾಗೂ ಲೀಲಾರವರ ಸೊಸೆ. ಹಾಗೂ ಎಮ್. ಆರ್. ಪಿ. ಎಲ್ ಉದ್ಯೋಗಿ ಪ್ರಕಾಶ್ ಅಮೀನ್ ರ ಪತ್ನಿಯಾಗಿರುತ್ತಾರೆ.