ನಿಟ್ಟೆ: ಉಷಾ ನರ್ಸಿಂಗ್ ಸೈನ್ಸ್ ನ 'ಉಡಾನ್ 2K25' ಉದ್ಘಾಟನೆ

ಕೊಣಾಜೆ: ನಿಟ್ಟೆ ಉಷಾ ನರ್ಸಿಂಗ್ ಸೈನ್ಸಸ್ ಸಂಸ್ಥೆಯ ವಾರ್ಷಿಕ ದಿನಾಚರಣೆ 'ಉಡಾನ್ 2K25' ಕಾರ್ಯಕ್ರಮವು ಶುಕ್ರವಾರ ಪನೀರ್ ಕ್ಯಾಂಪಸ್‌ನ ಮೈದಾನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹಕುಲಾಧಿಪತಿ(ಆಡಳಿತ) ವಿಶಾಲ್ ಹೆಗ್ಡೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ನವದೆಹಲಿಯ ಭಾರತೀಯ ನರ್ಸಿಂಗ್ ಕೌನ್ಸಿಲ್‌ನ ಹಿರಿಯ ಸಲಹೆಗಾರರು ಮತ್ತು ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್. ಭಾರತಿ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜು ನಿಯತಕಾಲಿಕೆ 'ದರ್ಪಣ 2K25' ಅನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ವೀರೇಶ್ ಕಡೇಮನಿ ಮತ್ತು ತೇಜ ಬಿ.ಸಿ. ಅವರು ಬರೆದ ಪ್ರೊಫೆಶನಲಿಸಮ್, ಪ್ರೊಫೆಶನಲ್ ವ್ಯಾಲ್ಯೂಸ್, ಎಥಿಕ್ಸ್, ಇನ್ಕ್ಲೂಡಿಂಗ್ ಬಯೋಎಥಿಕ್ಸ್ ಫಾರ್ ಬಿಎಸ್ಸಿ ನರ್ಸಿಂಗ್ ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ನವದೆಹಲಿಯ ಭಾರತೀಯ ನರ್ಸಿಂಗ್ ಕೌನ್ಸಿಲ್‌ನ ಹಿರಿಯ ಸಲಹೆಗಾರ್ತಿ ಮತ್ತು ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್. ಭಾರತಿ ಅವರನ್ನು ನರ್ಸಿಂಗ್ ವೃತ್ತಿಗೆ ನೀಡಿದ ಗಮನಾರ್ಹ ಕೊಡುಗೆಗಳಿಗಾಗಿ ಗೌರವಿಸಲಾಯಿತು.
ಸಿಸ್ಟರ್. ಜೀವಿತಾ ಲೋಬೊ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಮತ್ತು ಜಿಎನ್ಎಂ ವಿದ್ಯಾರ್ಥಿ ರೋಲ್ವಿನ್ ರೋಹನ್ ಡಿಸಿಲ್ವಾ ಅವರಿಗೆ ಅಸಾಧಾರಣ ನಾಯಕತ್ವ ಕೌಶಲ್ಯ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಿ ಡೀನ್ ಗೌರವ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ, ಎಂಸಿಎಚ್ ಪ್ರಯೋಗಾಲಯವನ್ನು ಗಣ್ಯರು ಉದ್ಘಾಟಿಸಿದರು.
ಪ್ರೊ. ಡಾ. ಸಬಿತಾ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಡಾ. ಫಾತಿಮಾ ಡಿಸಿಲ್ವಾ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಕ್ಲೀಟಾ ಅನ್ಲೈನ್ ಪಿಂಟೊ ವಂದಿಸಿದರು.