ಕುಪ್ಪೆಪದವಿನ ಉಜ್ವಲಾ ಕಂಬಳಿಗೆ ಗೌರವ ಡಾಕ್ಟರೇಟ್‌ ಪ್ರದಾನ

Update: 2024-09-30 18:06 GMT

ವಾಮಂಜೂರು: "ಗ್ರಾಮೀಣ ರೈತರ ಸಾಮಾಜಿಕ- ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಧಾನ ಮಂತ್ರಿಯವರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಹುಮುಖಿ ಪರಿಣಾಮ' ವಿಷಯದಲ್ಲಿ ಉಜ್ವಲಾ ಕಂಬಳಿ ಅವರು ಸಿದ್ಧಪಡಿಸಿ ಸಲ್ಲಿಸಿರುವ ಪ್ರೌಢ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾನಿಲಯದ ನಿರ್ವಹಣಾ ಮತ್ತು ವಾಣಿಜ್ಯ ಸಂಸ್ಥೆ ವಿಭಾಗವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಡಾ. ಶೈಲಶ್ರೀ ವಿ.ಟಿ. ಮತ್ತು ಡಾ. ನಿಯಾಝ್ ಪಣಕಜೆ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿರುವ ಡಾ. ಉಜ್ವಲಾ ಕಂಬಳಿ ಅವರು ಮೂಲತಃ ಕುಪ್ಪೆಪದವು ಬಳ್ಳಾಜೆಯ ಉದಯಕುಮಾರ್ ಮತ್ತು ಹರ್ಷಲತಾ ದಂಪತಿಯ ಪುತ್ರಿಯಾಗಿದ್ದಾರೆ.

ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಸಿ.ಎ. ರಾಘವೇಂದ್ರ ರಾವ್, ಹಂಗಾಮಿ ಉಪಕುಲಪತಿ ಡಾ. ಎ. ಶ್ರೀನಿವಾಸ ರಾವ್, ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್, ಸಂಶೋಧನಾ ನಿರ್ದೇಶಕ ಡಾ. ಪ್ರವೀಣ್ ಬಿ. ಎಂ., ಮೈಸೂರು ವಿಶ್ವವಿದ್ಯಾನಿಲಯದ ಬಾಹ್ಯ ಪರೀಕ್ಷಕ ಡಾ. ಅಶೋಕ್ ಎಂ. ಎಲ್., ಸಂಶೋಧನಾ ಮಾರ್ಗದರ್ಶಕರು, ಅಧ್ಯಾಪಕರು, ಸಹ-ಸಂಶೋಧಕರು ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News