ಕೊಣಾಜೆ ನಡುಪದವಿನಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ನಾಗರಿಕರು

Update: 2023-10-06 14:30 GMT

ಸಾಂದರ್ಭಿಕ ಚಿತ್ರ

ಕೊಣಾಜೆ: ಕೊಣಾಜೆ ಸಮೀಪದ ನಡುಪದವವಿನ ಪರಿಸರದಲ್ಲಿ ಗುರುವಾರ ರಾತ್ರಿ ಚಿರತೆಯೊಂದು ಪ್ರತ್ಯಕ್ಷಗೊಂಡಿದ್ದು, ಈ ಭಾಗದ ನಾಗರಿಕರು ಆತಂಕಗೊಂಡಿದ್ದಾರೆ.

ನಡುಪದವು ಮಸೀದಿ ಸಮೀಪದ‌ ರಸ್ತೆಯ ಬಳಿ ಚಿರತೆಯೊಂದು ರಸ್ತೆಯ ಒಂದು ಬದಿಯಿಂದ‌ ಮತ್ತೊಂದು ಭಾಗಕ್ಕೆ ಜಿಗಿದು ಓಡಿರುವುದನ್ನು‌ ಗುರುವಾರ ರಾತ್ರಿ 8 ಗಂಟೆಯ ವೇಳೆಗೆ ಆಸೀಫ್ ಎನ್ನುವವರು ನೋಡಿದ್ದು ಬಳಿಕ ಪರಿಸರದವರಲ್ಲಿ ತಿಳಿಸಿದ್ದರು. ನಂತರ ಸುಮಾರು 9.30ರ ವೇಳೆಗೆ ನಡುಪದವು ಬಾಡಿಗೆಮನೆಯಲ್ಲಿ ವಾಸವಾಗಿರುವ ಕಾಲೇಜೊಂದರ ಪ್ರಾಧ್ಯಾಪಕ ಚೇತನ್ ಎನ್ನುವವರು ಊಟ ಮುಗಿಸಿ ವಾಕಿಂಗ್ ಹೋಗುತ್ತಿದ್ದ ವೇಳೆ ಇಲ್ಲೇ ಸಮೀಪದ ಲಾಡ ರಸ್ತೆಯಲ್ಲಿ ಸ್ಕೂಟರೊಂದು ಬರುತ್ತಿದ್ದಾಗ ಅದರ ಎದುರಿಗೇ ಚಿರತೆ ರಸ್ತೆ ದಾಟಿ ಓಡಿ ಹೋಗಿರುವುದನ್ನು ನೋಡಿ ಭಯಬೀತರಾಗಿದ್ದರು. ಬಳಿಕ ಮನೆಗೆ ವಾಪಸ್ಸು ಬಂದು ಸಮೀಪದ‌ ಮನೆಯವರಿಗೆ ವಿಷಯ ತಿಳಿಸಿದ್ದರು. ಒಂದೇ ದಿನ ರಾತ್ರಿ ಇಬ್ಬರು ವ್ಯಕ್ತಿಗಳು ಚಿರತೆಯನ್ನು ನೋಡಿದ್ದಾರೆ. ಇದೀಗ ಪರಿಸರದ ನಾಗರಿಕರು ಆತಂಕದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News