ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್‌ನಲ್ಲಿ ಪ್ರೇರಣಾ ಶಿಬಿರ
ಮಂಗಳೂರು, ಆ.12: ಇನೋಳಿಯ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್‌ನ ಪ್ರಥಮ ವರ್ಷದ ಬಿಸಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮವು ಕಾಲೇಜಿನ ಎಮರ್ಜಿಂಗ್ ಸೈನ್ಸ್ ಸೆಮಿನಾರ್ ಹಾಲಿನಲ್ಲಿ ಸೋಮವಾರ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಪ್ರೊ. ಪವನ್ ಬಿಪಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಸಾಧಿಸಲು ಅವಕಾಶಗಳನ್ನು ಬಳಸಿಕೊಳ್ಳಬೇಕು ಅದಕ್ಕಾಗಿ ಆತ್ಮಸ್ಥೈರ್ಯ ಹಾಗೂ ಮನೋಬಲ ಬೆಳಸಬೇಕು ಎಂದರು.
ಅತಿಥಿಗಳಾಗಿ ಬಿಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್‌ಐ ಮಂಜೂರ್ ಬಾಷಾ, ಬೀಡ್ಸ್ ಪ್ರಾಂಶುಪಾಲ ಖಲೀಲ್ ಅಬ್ದುಲ್ ರಝಾಕ್, ಪಿಯು ಪ್ರಾಂಶುಪಾಲ ಪ್ರೊ. ಅಬ್ದುಲ್ ಲತೀಫ್, ಪೊಲಿಟೆಕ್ನಿಕ್ ನಿರ್ದೇಶಕ ಪ್ರೊ. ಪ್ರಥ್ವಿರಾಜ್ ಹಾಗೂ ಡಾ.ನಳಿನಿ, ಪ್ರಫುಲ್ಲಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಅಝೀಝ್ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಮುಖ್ಯಸ್ಥೆ ಪ್ರೊ.ಹನ್ನತ್ ವಂದಿಸಿದರು. ವಿದ್ಯಾರ್ಥಿ ಮುಹಮ್ಮದ್ ಅನಾಸ್ ಕಾರ್ಯಕ್ರಮ ನಿರೂಪಿಸಿದರು.