ವಿಟ್ಲ: ನಾಪತ್ತೆಗಾಗಿದ್ದ ಹುಲಿವೇಷಧಾರಿಯ ಮೃತದೇಹ ಪತ್ತೆ
Update: 2025-03-22 20:01 IST

ವಿಟ್ಲ: ವಿಟ್ಲ ಪ್ರೈವೇಟ್ ಬಸ್ ನಿಲ್ದಾಣದ ಹತ್ತಿರದ ಮನೆಯೊಂದರ ಕೆರೆಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.
ಬೊಬ್ಬೆಕೇರಿ ನಿವಾಸಿ ಹುಲಿ ವೇಷಧಾರಿ ಸುಂದರ ಮೃತಪಟ್ಟ ವ್ಯಕ್ತಿ. ಅವರು ಕಳೆದ ಆರು ತಿಂಗಳ ಹಿಂದೆ ಮನೆಯಿಂದ ಹೋಗಿದ್ದು ನಂತರ ನಾಪತ್ತೆಯಾಗಿದ್ದರು.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ವಿಟ್ಲದ ಪಾಲುಬಿದ್ದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.