‌ವಿಟ್ಲ: ಮೀಫ್ ವತಿಯಿಂದ ಮೊಂಟೆಸ್ಸರಿ ಶಿಕ್ಷಕರ ತರಬೇತಿ ಶಿಬಿರ

Update: 2024-07-13 07:20 GMT


Delete Edit

ಬಂಟ್ವಾಳ: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (MEIF) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವತಿಯಿಂದ ಈಸ್ಟ್ ಝೋನ್ ಮೊಂಟೆಸ್ಸರಿ(KG) ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವು ಜುಲೈ 13 ಶನಿವಾರ ವಿಟ್ಲದ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಕನ್ವೀನರ್ ಶೈಖ್ ರಹ್ಮತುಲ್ಲಾ ರವರು ಸ್ವಾಗತಿಸಿ, ಜನಪ್ರಿಯ ಸೆಂಟ್ರಲ್ ಸ್ಕೂಲ್ ಇದರ ನಿರ್ದೇಶಕ ನೌಶೀನ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಮ್ಇಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ರಶೀದ್ ವಿಟ್ಲ ಮಾತನಾಡಿ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಮೀಫ್ ಒಕ್ಕೂಟದ ಅಧ್ಯಕ್ಷ  ಮೂಸಬ್ಬ. ಪಿ.ಬ್ಯಾರಿ ರವರು ಅಧ್ಯಕ್ಷೀಯ ಭಾಷಣಡಿದರು. ‌ಮೀಫ್ ಒಕ್ಕೂಟದ ಕಾರ್ಯಕ್ರಮ ಕನ್ವೀನರ್ ಮುಹಮ್ಮದ್ ಶಾರಿಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಪ್ರಾಂಶುಪಾಲ ಲಿಬಿನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ಅವರು ವಂದಿಸಿದರು.

ಕಂಬಳಬೆಟ್ಟು  ಜನಪ್ರಿಯ ಸೆಂಟ್ರಲ್ ಸ್ಕೂಲ್  ಪ್ರಾಯೋಜಿಸಿದ್ದ ಈ ತರಬೇತಿ ಕಾರ್ಯಗಾರದಲ್ಲಿ ಮಂಗಳೂರಿನ ಯೇನಪೋಯ ವಿದ್ಯಾಸಂಸ್ಥೆಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ ವಿಭಾಗದ ತರಬೇತುದಾರರು ತರಬೇತಿ ನೀಡಿದರು. ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ ತಾಲೂಕುಗಳ 21 ವಿದ್ಯಾಸಂಸ್ಥೆಗಳ ಒಟ್ಟು 90 ಶಿಕ್ಷಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಯೇನಪೋಯ ವಿದ್ಯಾ ಸಂಸ್ಥೆಯ ಮುಖ್ಯ ತರಬೇತುದಾರರಾದ ತ್ರಿಶಾ ಹಾಗೂ ಇತರ 7 ಸದಸ್ಯರ ತಂಡವು ಅತ್ಯಂತ ಯಶಸ್ವಿಯಾಗಿ ಕಾರ್ಯಾಗಾರವನ್ನು ನೆರವೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News