ನಾಗರಿಕ ಯುವಜನ ವೇದಿಕೆಯಿಂದ ಯೂತ್ ಸಿವಿಲ್ ಫಾರಂ ಬೆಳ್ತಂಗಡಿ ನೂತನ ಸಮಿತಿ ಅಸ್ತಿತ್ವಕ್ಕೆ

Update: 2024-11-14 04:15 GMT

ಬೆಳ್ತಂಗಡಿ:  ಸಮಾಜದ ಸಾಮಾಜಿಕ, ಶೈಕ್ಷಣಿಕ ಅಭಿವ್ರಧ್ಧಿಯನ್ನು ಒಗ್ಗಟ್ಟಾಗಿ ಬಲಪಡಿಸುವ ಸಲುವಾಗಿ ಸಮಾನ ಮನಸ್ಕ ಯುವಕರ ಸಮಾಲೋಚನೆ ಸಭೆ ಉಜಿರೆ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ನಡೆಯಿತು.

ತಾಲೂಕಿನ ವಿವಿಧ ಯುವ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.ಸಮಾಜದ ಒಗ್ಗಟ್ಟನ್ನು ಕಾಪಾಡುವ ಸಲುವಾಗಿ ರಚನಾತ್ಮಕವಾದ ಕಾರ್ಯಗಳನ್ನು ಮಾಡುವುದು,ಸಮಾಜದ ಸವಾಲುಗಳನ್ನು ಕಾನೂನಾತ್ಮವಾಗಿ ಎದುರಿಸುವುದು,ಕೋಮು ಸೌಹಾರ್ಧತೆ ಬೆಳೆಸುವುದು,ತಪ್ಪು ಸಂದೇಶಗಳ ವಿರುಧ್ಧ ನೈಜ ವಿಷಯಗಳನ್ನು ಸಮಾಜಕ್ಕೆ ತಿಳಿಸುವುದು,ವಿಧ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗ್ರತಿ ಮೂಡಿ ಸುವುದು,ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು.

ಈ ನಿಟ್ಟಿನಲ್ಲಿ ಸಮಾಲೋಚನೆ ಸಭೆಯಲ್ಲಿ ಯೂತ್ ಸಿವಿಲ್ ಫಾರಮ್ ಎಂಬ ನೂತನ ಸಮಿತಿಯನ್ನು ರೂಪಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಅಡ್ವೋಕೇಟ್ ನವಾಝ್ ಶರೀಫ್ ಅರೆಕ್ಕಲ್ ,ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಹಸನ್ ಮುಬಾರಕ್ ಸಖಾಫಿ ಪುಂಜಾಲಕಟ್ಟೆ, ಮುಹಮ್ಮದ್ ಸ್ವಾಲಿಹ್ ಮದ್ದಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಹಕೀಂ ಕೊಕ್ಕಡ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಗೇರುಕಟ್ಟೆ,ಜೊತೆ ಕಾರ್ಯದರ್ಶಿಯಾಗಿ ಸಾದಿಖ್ ಬಳಂಜ, ರಿಯಾಝ್ ಫೈಝಿ, ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು, ಕೋಶಾಧಿಕಾರಿಯಾಗಿ ಹಕೀಂ ಬಂಗೇರುಕಟ್ಟೆ, ಸಂಚಾಲಕರಾಗಿ ಸಿರಾಜ್ ಚಿಲಿಂಬಿ, ಕಲಂದರ್ ಕೊಕ್ಕಡ, ಅಝೀಝ್ ಅಶ್ಶಾಫಿ,ಶ ಫೀ ಉಮರ್ ಬಂಗಾಡಿ ಸಂಯೋಜಕರಾಗಿ ನಝೀರ್ ಅಝ್ಹರಿ ಬೊಳ್ಮಿನಾರ್, ಸದಸ್ಯರಾಗಿ ಶಾರುಕ್ ಉಜಿರೆ,ತುರಾಬ್ ಪಿಲ್ಯ ಇವರನ್ನು ಆಯ್ಕೆ ಮಾಡಲಾಯಿತು.

ನವಾಝ್ ಶರೀಫ್ ಸ್ವಾಗತಿಸಿದರು,ರಿಯಾಝ್ ಫೈಝಿ ದುವಾ ನೆರವೇರಿಸಿದರು,ನಝೀರ್ ಅಝ್ಹರಿ ಉಧ್ಘಾಟಿಸಿದರು, ಹಕೀಂ ಕೊಕ್ಕಡ ವಿಷಯ ಪ್ರಸ್ತಾಪಿಸಿದರು, ಅಬ್ದುಲ್ ಕರೀಂ ಗೇರುಕಟ್ಟೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News