ಸುರಂಗ ಕುಸಿತ| 17 ದಿನಗಳ ರಕ್ಷಣಾ ಕಾರ್ಯಾಚರಣೆ ಯಶಸ್ವಿ: ಹೊರಬಂದ ಓರ್ವ ಕಾರ್ಮಿಕ
Update: 2023-11-28 19:59 IST

Photo: PTI
ಉತ್ತರಕಾಶಿ: ಉತ್ತರಾಖಂಡ ಸುರಂಗ ಕುಸಿತದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರ ತರುವ ಕಾರ್ಯಾಚರಣೆ ಆರಂಭಗೊಂಡಿದ್ದು, ಓರ್ವ ಕಾರ್ಮಿಕ ಹೊರ ಬಂದಿದ್ದಾರೆ.
41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರ ಕರೆತರಲಾಗುತ್ತಿದೆ.
ಕಾರ್ಮಿಕರನ್ನು ಹೊರ ಕರೆತರುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯಲು 41 ಆಂಬ್ಯುಲೆನ್ಸ್‌ಗಳನ್ನು ಸಜ್ಜಾಗಿ ಇರಿಸಲಾಗಿತ್ತು.
ಸಮುದಾಯ ಆರೋಗ್ಯ ಕೇಂದ್ರ ಚಿನ್ಯಾಲಿಸೌರ್‌ನಲ್ಲಿ 41 ಕಾರ್ಮಿಕರ ಚಿಕಿತ್ಸೆಗಾಗಿ ಸಿದ್ಧತೆ ಮಾಡಲಾಗಿದ್ದು, ಎಲ್ಲರನ್ನೂ ಇಲ್ಲಿಗೆ ಕರೆತಂದು ಆರೋಗ್ಯ ಪರಿಶೀಲನೆ ನಡೆಸಲಾಗುತ್ತದೆ.
ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಕಾರ್ಮಿಕರು ಬರೋಬ್ಬರಿ 17 ದಿನಗಳಿಂದ ಸುರಂಗದೊಳಗೆ ಸಿಲುಕಿದ್ದರು.