ಚಂದ್ರಯಾನ 3ರ 5ನೇ ಕಕ್ಷೆ ಏರಿಕೆ ಪ್ರಕ್ರಿಯೆ ಯಶಸ್ವಿ

Update: 2023-07-25 16:45 GMT

Photo : ಚಂದ್ರಯಾನ 3 | PTI 

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಮಂಗಳವಾರ ಚಂದ್ರಯಾನ-3 ನೌಕೆಯನ್ನು ಮೇಲಿನ ಕಕ್ಷೆಗೆ ಏರಿಸುವ ಐದನೇ ಹಾಗೂ ಕೊನೆಯ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

ನೌಕೆಯನ್ನು ಮೇಲಿನ ಕಕ್ಷೆಗೆ ಏರಿಸುವ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ, ಟ್ರಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC)ನಿಂದ ಯಶಸ್ವಿಯಾಗಿ ನಿರ್ವಹಿಸಲಾಯಿತು ಎಂದು ಇಸ್ರೋ ತಿಳಿಸಿದೆ.

x ಚಂದ್ರಯಾನ-3 ನೌಕೆಯು 127609 ಕಿ.ಮೀ. 236 ಕಿ.ಮೀ. ಆಯಾಮದ ಕಕ್ಷೆಗೆ ಸೇರ್ಪಡೆಗೊಂಡಿದೆ. ಅಂದರೆ ಈ ಕಕ್ಷೆಯಲ್ಲಿ ಚಂದ್ರಯಾನವು ಚಲಿಸುವಾಗ, ಅದು ಭೂಮಿಯ ಅತಿ ಸಮೀಪಕ್ಕೆ ಬರುವಾಗ 236 ಕಿ.ಮೀ. ದೂರದಲ್ಲಿರುತ್ತದೆ ಮತ್ತು ಭೂಮಿಯಿಂದ ಅತಿ ದೂರಕ್ಕೆ ಹೋದಾಗ 1,27,609 ಕಿ.ಮೀ. ದೂರದಲ್ಲಿರುತ್ತದೆ.

‘‘ವೀಕ್ಷಣೆಗಳ ಬಳಿಕ, ಚಂದ್ರಯಾನವು ಈ ಕಕ್ಷೆಗೆ ಸೇರ್ಪಡೆಗೊಂಡಿರುವುದನ್ನು ಖಚಿತಪಡಿಸಲಾಗುವುದು’’ ಎಂದು ಇಸ್ರೋ ತಿಳಿಸಿದೆ.

ಇದಕ್ಕಿಂತ ಮೊದಲಿನ ನಾಲ್ಕು ಕಕ್ಷೆ ಎತ್ತರಿಸುವ ಪ್ರಕ್ರಿಯೆಗಳನ್ನು ಐಎಸ್ಟಿಆರ್ಎಸಿಯಿಂದ ಜುಲೈ 15 ಮತ್ತು 20ರ ನಡುವೆ ನಿರ್ವಹಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News