ಮಧ್ಯಪ್ರದೇಶ | ಕೋಮು ಗಲಭೆ ಸೃಷ್ಟಿಸಲು 60 ಗೋಹತ್ಯೆ ; 24 ಮಂದಿಯನ್ನು ಬಂಧಿಸಿದ ಪೊಲೀಸರು
ಭೋಪಾಲ್ : ಕಳೆದ ವಾರ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಹಸುಗಳು ಸೇರಿದಂತೆ 60 ಕ್ಕೂ ಹೆಚ್ಚು ಗೋ ಪ್ರಾಣಿಗಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 24 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಬಂಧಿತ ಎಂಟು ಆರೋಪಿಗಳು ನಾಗ್ಪುರದವರಾಗಿದ್ದು, ಕೋಮು ಪ್ರಚೋದನೆ ನಡೆಸಲು ಪ್ರಾಣಿಗಳನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 19 ಮತ್ತು 20 ರಂದು ಜಿಲ್ಲೆಯ ಧೂಮಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾಕರ್ತಲಾ ಅರಣ್ಯ ಪ್ರದೇಶದಲ್ಲಿ 28 ಹಸುಗಳು ಮತ್ತು ಎತ್ತುಗಳ ಕಳೆಬರಗಳು ಪತ್ತೆಯಾಗಿದ್ದವು. 18 ಹಸುಗಳ ಕಳೆಬರಗಳು ಸಿಯೋನಿಯ ಪಿಂಡ್ರೈ ಗ್ರಾಮದ ಬಳಿಯ ವೈಗಂಗಾ ನದಿಯಲ್ಲಿ ಕಂಡು ಬಂದಿತ್ತು.
ಆರೋಪಿಗಳಿಗೆ ಹಣ ನೀಡಿ ಗೋ ಹತ್ಯೆ ಮಾಡುವ ಕೆಲಸವನ್ನು ನಿಯೋಜಿಸಲಾಗಿತ್ತು. ಸಿಯೋನಿಯ ಸ್ಥಳೀಯ ನಿವಾಸಿಗಳೂ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆಬರ ಪತ್ತೆಯಾದ ಹಿನ್ನೆಲೆಯಲ್ಲಿ ಸಿಯೋನಿ ಜಿಲ್ಲಾಧಿಕಾರಿ ಕ್ಷಿತಿಜ್ ಸಿಂಘಾಲ್ ಮತ್ತು ಎಸ್ಪಿ ರಾಕೇಶ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.