ಲಾರಿಗೆ ಢಿಕ್ಕಿ ಹೊಡೆದ ಆಟೋ: 8 ಶಾಲಾ ಮಕ್ಕಳಿಗೆ ಗಾಯ

Update: 2023-11-22 12:14 GMT

Screengrab:X/@PTI_News

ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ಇಂದು ಬೆಳಿಗ್ಗೆ ಆಟೋರಿಕ್ಷಾ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಎಂಟು ಶಾಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ನಗರದ ಸಂಗಮ್‌ ಶರತ್‌ ಥಿಯೇಟರ್‌ ಸಮೀಪ ನಡೆದ ಈ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿದ್ಯಾರ್ಥಿಗಳು ಮುಂಜಾನೆ ಶಾಲೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಲಾರಿ ಫ್ಲೈಓವರ್‌ ಕೆಳಭಾಗದಲ್ಲಿನ ರಸ್ತೆಯಲ್ಲಿ ಸಿಗ್ನಲ್‌ ದಾಟುತ್ತಿರುವಾಗ ವೇಗವಾಗಿ ಬಂದ ಆಟೋರಿಕ್ಷಾ ಅದಕ್ಕೆ ಢಿಕ್ಕಿ ಹೊಡೆದಿದೆ. ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮಕ್ಕಳನ್ನು ಸ್ಥಳೀಯರು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು.

ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಆದರೆ ಅವರಿಗೆ ಉಂಟಾಗಿರುವ ಗಾಯಗಳ ತೀವ್ರತೆಯ ಕುರಿತಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News