ಪಕ್ಷದ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ: ಆಪ್ ಆರೋಪ

Update: 2024-02-02 09:53 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ತಮ್ಮ ಪಕ್ಷದ ಕೆಲವು ಶಾಸಕರು ಹಾಗೂ ಕೌನ್ಸಿಲರ್ ಗಳನ್ನು ಒಂದೋ ಗೃಹ ಬಂಧನದಲ್ಲಿಡಲಾಗಿದೆ ಇಲ್ಲವೆ ವಶಕ್ಕೆ ಪಡೆಯಲಾಗಿದೆ ಹಾಗೂ ಬಿಜೆಪಿಯ ಮುಖ್ಯ ಕಚೇರಿಯ ಎದುರು ಪ್ರತಿಭಟನೆ ನಡೆಸದಂತೆ ಸ್ವಯಂಸೇವಕರನ್ನು ತಡೆಯಲಾಗಿದೆ ಎಂದು ಆಪ್ ಪಕ್ಷವು ಆರೋಪಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಪ್ ನ ಹಿರಿಯ ನಾಯಕ ಗೋಪಾಲ್ ರಾಯ್, ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮಾಡಿದಂತೆ ಅಧಿಕಾರವನ್ನು ಕಿತ್ತುಕೊಳ್ಳಲು ಬಿಜೆಪಿಯು ಯಾವ ವಿಧಾನವನ್ನು ಬೇಕಾದರೂ ಅನುಸರಿಸಬಹುದು ಎಂದು ಆರೋಪಿಸಿದರು.

“ಈ ನಡೆಯ ವಿರುದ್ಧ ಆಪ್ ಪ್ರತಿಭಟಿಸಲಿದೆ ಎಂಬ ಕಾರಣಕ್ಕೆ ಅವರು ದಿಗಿಲುಗೊಂಡಿದ್ದು, ದಿಲ್ಲಿಯ ಎಲ್ಲ ಭಾಗಗಳಲ್ಲೂ ಭಾರಿ ಪ್ರಮಾಣದ ಪೊಲೀಸರನ್ನು ನಿಯೋಜಿಸಿದ್ದಾರೆ. ಸದ್ಯ, ವಿಧಾನಸಭಾಧ್ಯಕ್ಷ ರಾಮ್ ನಿವಾಸ್ ಗೋಯಲ್ ಹಾಗೂ ದಿಲ್ಲಿಯ ಉಪ ಮೇಯರ್ ಆಲೆ ಮುಹ್ಮದ್ ಇಕ್ಬಾಲ್ ಸೇರಿದಂತೆ ನಮ್ಮ ಹಲವಾರು ಶಾಸಕರನ್ನು ಗೃಹ ಬಂಧನದಲ್ಲಿರಿಸಲಾಗಿದೆ” ಎಂದೂ ಗೋಪಾಲ್ ರಾಯ್ ಆರೋಪಿಸಿದರು.

ಅವರನ್ನೆಲ್ಲ ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿಯು ಗೆಲುವು ಸಾಧಿಸಿತ್ತು. ಆದರೆ, ಈ ಗೆಲುವಿಗಾಗಿ ಬಿಜೆಪಿಯು ವಂಚನೆಯ ತಂತ್ರವನ್ನು ಬಳಸಿದೆ ಎಂದು ಆರೋಪಿಸಿರುವ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News