ಅಮೃತಸರ | ಗಡಿಯ ಸಮೀಪ ಪಾಕ್ ನುಸುಳುಕೋರನ ಹತ್ಯೆ
Update: 2024-09-17 15:43 GMT
ಚಂಡಿಗಡ : ಪಂಜಾಬಿನ ಅಮೃತಸರ ವಿಭಾಗದಲ್ಲಿಯ ಅಂತರರಾಷ್ಟ್ರೀಯ ಗಡಿಯಲ್ಲಿ ಸೋಮವಾರ ರಾತ್ರಿ ಪಾಕಿಸ್ತಾನಿ ನುಸುಳುಕೋರನೋರ್ವ ಬಿಎಸ್‌ಎಫ್ ಗುಂಡಿಗೆ ಬಲಿಯಾಗಿದ್ದಾನೆ.
ರಾತ್ರಿ 9:15ರ ಸುಮಾರಿಗೆ ನುಸುಳುಕೋರನ ಶಂಕಾತ್ಮಕ ಚಲನವಲನಗಳನ್ನು ಬಿಎಸ್‌ಎಫ್ ಯೋಧರು ಗಮನಿಸಿದ್ದರು. ಕತ್ತಲ ಮರೆಯಲ್ಲಿ ಅಂತರಾಷ್ಟ್ರೀಯ ಗಡಿಯನ್ನು ದಾಟಿದ್ದ ಆ ವ್ಯಕ್ತಿ ರತನಖುರ್ದ್ ಗ್ರಾಮದ ಸಮೀಪದ ಗಡಿ ಬೇಲಿಯತ್ತ ಸಾಗುತ್ತಿದ್ದ. ಸೂಚನೆ ನೀಡಿದರೂ ಆತ ನಿಲ್ಲದಿದ್ದಾಗ ಯೋಧರು ಗುಂಡು ಹಾರಿಸಿದ್ದು, ನುಸುಳುಕೋರ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ಪಡೆಯ ಅಧಿಕಾರಿಯೋರ್ವರು ತಿಳಿಸಿದರು.
ನುಸುಳುಕೋರನ ಬಳಿಯಿದ್ದ 270 ಪಾಕಿಸ್ತಾನಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಮೃತದೇಹವನ್ನು ಘರಿಂದಾ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.