371 ಕೋಟಿ ರೂ.ದುರ್ಬಳಕೆ ಪ್ರಕರಣ | ಚಂದ್ರಬಾಬು ನಾಯ್ಡುಗೆ ಈಡಿ ಕ್ಲೀನ್ ಚಿಟ್

Update: 2024-10-16 17:54 GMT

ಎನ್.ಚಂದ್ರಬಾಬು ನಾಯ್ಡು | PC : PTI 

ಹೊಸದಿಲ್ಲಿ : 371 ಕೋಟಿ ರೂ.ಗಳ ಕೌಶಲ್ಯಾಭಿವೃದ್ಧಿ ನಿಗಮ ಹಗರಣದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಜಾರಿ ನಿರ್ದೇಶನಾಲಯ(ಈಡಿ)ವು ಕ್ಲೀನ್ ಚಿಟ್ ನೀಡಿದೆ.

ಆಗಿನ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ನೇತೃತ್ವದ ಸರಕಾರವು ನಡೆಸಿದ್ದ ತನಿಖೆಗೆ ಸಂಬಂಧಿಸಿದಂತೆ ನಾಯ್ಡು ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. 2023,ಅ.1ರಂದು ವೈದ್ಯಕೀಯ ಕಾರಣಗಳಿಂದ ಮಧ್ಯಂತರ ಜಾಮೀನಿನಲ್ಲಿ 50 ದಿನಗಳ ಜೈಲುವಾಸದಿಂದ ಬಿಡುಗಡೆಗೊಂಡಿದ್ದರು.

ನ.20ರಂದು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ನಾಯ್ಡು ಅವರಿಗೆ ನಿಯಮಿತ ಜಾಮೀನನ್ನು ಮಂಜೂರು ಮಾಡಿತ್ತು.

ನಾಯ್ಡು ಕೌಶಲ್ಯಾಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 300 ಕೋಟಿ ರೂ.ಗಳ ನಷ್ಟವುಂಟಾಗಿದೆ ಎಂದು ಆರೋಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News