ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ, ಹೆರಿಗೆ ರಜೆ: ಆಂಧ್ರಪ್ರದೇಶ ಮುಖ್ಯಮಂತ್ರಿ ಅನುಮೋದನೆ

Update: 2025-03-01 20:20 IST
N. Chandrababu Naidu

 ಎನ್. ಚಂದ್ರಬಾಬು ನಾಯ್ಡು | PTI 

  • whatsapp icon

ಅಮರಾವತಿ: ಪ್ರಮಾಣಿತ ಸಾಮಾಜಿಕ ಆರೋಗ್ಯ ಕಾರ್ಯಕರ್ತ (ಆಶಾ)ರಿಗೆ ಗ್ರಾಚ್ಯುಟಿ ಮತ್ತು ವೇತನಸಹಿತ ಹೆರಿಗೆ ರಜೆ ನೀಡುವ ಹಾಗೂ ನಿವೃತ್ತಿ ವಯಸ್ಸನ್ನು ಏರಿಸುವ ಪ್ರಸ್ತಾವಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅನುಮೋದನೆ ನೀಡಿದ್ದಾರೆ.

ಜನರು ಮತ್ತು ಆರೋಗ್ಯಸೇವೆ ವ್ಯವಸ್ಥೆಯ ನಡುವೆ ಮಹತ್ವದ ಕೊಂಡಿಯಾಗಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಪಾವತಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

‘‘30 ವರ್ಷಗಳ ಕಾಲ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ ನಿವೃತ್ತಿಯ ವೇಳೆ 1.50 ಲಕ್ಷ ರೂಪಾಯಿ ಮೊತ್ತವನ್ನು ಗ್ರಾಚ್ಯುಟಿಯಾಗಿ ನೀಡಲಾಗುವುದು’’ ಎಂದು ಶನಿವಾರ ಬಿಡುಗಡೆ ಮಾಡಲಾದ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ. ಇದರ ಪ್ರಯೋಜನವನ್ನು ಆಂಧ್ರಪ್ರದೇಶದ 42,752 ಆಶಾ ಕಾರ್ಯಕರ್ತೆಯರು ಪಡೆಯಲಿದ್ದಾರೆ ಎಂದು ಅದು ಹೇಳಿದೆ.

ಅದೇ ವೇಳೆ, ಅರ್ಹ ಆರೋಗ್ಯ ಕಾರ್ಯಕರ್ತೆಯರ ಮೊದಲ ಎರಡು ಹೆರಿಗೆಗಳಿಗೆ 180 ದಿನಗಳ ವೇತನಸಹಿತ ರಜೆಯನ್ನು ನೀಡಲಾಗುವುದು ಎಂಬುದಾಗಿಯೂ ಪತ್ರಿಕಾ ಹೇಳಿಕೆ ತಿಳಿಸಿದೆ.

ಜೊತೆಗೆ, ಆಶಾ ಕಾರ್ಯಕರ್ತೆಯರ ನಿವೃತ್ತಿ ಪ್ರಾಯವನ್ನು 60ರಿಂದ 62 ವರ್ಷಕ್ಕೆ ಏರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News