ಅರುಣಾಚಲ ಅಂದು, ಇಂದು, ಎಂದೂ ಭಾರತದ ಭಾಗ: ಪ್ರಧಾನಿ ಮೋದಿ

Update: 2024-04-09 03:14 GMT

ಹೊಸದಿಲ್ಲಿ: ಅರುಣಾಚಲ ಪ್ರದೇಶ ಭೂಭಾಗದ ಮೇಲೆ ಚೀನಾ ಹಕ್ಕು ಪ್ರತಿಪಾದನೆಯನ್ನು ಬಲವಾಗಿ ತಳ್ಳಿಹಾಕಿದ ಪ್ರಧಾನಿ ನರೇಂದ್ರ ಮೋದಿ, " ಭಾರತದ ಅವಿಭಾಜ್ಯ ಅಂಗವಾದ ಈ ರಾಜ್ಯ ಹಾಗೆಯೇ ಮುಂದುವರಿಯುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸಕಾಲಿಕ ಹಸ್ತಕ್ಷೇಪ ಮತ್ತು ರಾಜ್ಯ ಸರ್ಕಾರದ ಪ್ರಯತ್ನಗಳಿಂದಾಗಿ, ರಾಜ್ಯದಲ್ಲಿ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದು ಅವರು ಹೇಳಿದ್ದಾರೆ.

"ಅರುಣಾಚಲ ಪ್ರದೇಶ ಅರುಣಾಚಲ ಅಂದು, ಇಂದು ಹಾಗೂ ಎಂದೂ ಭಾರತದ ಅವಿಭಾಜ್ಯ ಅಂಗ" ಎಂದು ಅಸ್ಸಾಂ ಟ್ರಿಬ್ಯೂನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಅರುಣಾಚಲ ಪ್ರದೇಶದಲ್ಲಿ ಸೆಲಾ ಸುರಂಗದ ಆಯಕಟ್ಟಿನ ಮಹತ್ವವನ್ನು ವಿಶೇಷವಾಗಿ ಉಲ್ಲೇಖಿಸಿದ ಮೋದಿ, ಇದು ಅರುಣಾಚಲ ಪ್ರದೇಶಕ್ಕೆ ವರ್ಷವಿಡೀ ಸೇನೆ ಹಾಗೂ ಸಾಮಗ್ರಿಗಳನ್ನು ತ್ವರಿತವಾಗಿ ಸಾಗಾಣಿಕೆ ಮಡಲು ಸೌಲಭ್ಯ ಕಲ್ಪಿಸಿದೆ ಎಂದರು.

"ಇದು ಆಯಕಟ್ಟಿನ ಹಾಗೂ ಇಡೀ ಪರಿಸ್ಥಿತಿಯನ್ನೇ ಬದಲಿಸಬಲ್ಲ ಸೌಕರ್ಯವಾಗಿದ್ದು, ತವಾಂಗ್ ಗೆ ಸರ್ವಋತು ಸಂಪರ್ಕವನ್ನು ಕಲ್ಪಿಸುತ್ತದೆ" ಎಂದು ಹೇಳಿದರು.

ಅರುಣಾಚಲ ಪ್ರದೇಶದಲ್ಲಿ ದೊನ್ಯಿ ಪೋಲೊ ವಿಮಾನ ನಿಲ್ದಾಣ ಹಾಗೂ ಇತರ ಅಭಿವೃಧ್ಧಿ ಕಾರ್ಯಗಳನ್ನು ಆರಂಭಿಸಲಾಗಿದ್ದು, 55 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಗೃಹನಿರ್ಮಾಣ ಮತ್ತು ನೀರು ಸೌಲಭ್ಯ ಕಲ್ಪಿಸುವ ಯೋಜನೆ ರಾಜ್ಯದ ಸಮೃದ್ಧಿಯನ್ನು ಸುಧಾರಿಸಲಿದೆ ಎಂದರು.

ಉನ್ನತಿ ಹಾಗೂ ಇತರ ಯೋಜನೆಗಳ ಮೂಲಕ ಈಶಾನ್ಯ ಅಭಿವೃಧ್ಧಿಗೆ ತಮ್ಮ ಸರ್ಕಾರ ಗಮನ ಹರಿಸಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News