ಪಂಜಾಬ್ ನ ಎಲ್ಲ ಲೋಕಸಭಾ ಸ್ಥಾನಕ್ಕೆ ಎಎಪಿ ಸ್ಪರ್ಧೆ: ಇಂಡಿಯಾ ಮೈತ್ರಿಕೂಟದಲ್ಲಿ ಒಡಕು?

Update: 2023-12-18 02:49 GMT

ಅರವಿಂದ್ ಕೇಜ್ರಿವಾಲ್ (PTI)

ಭಟಿಂಡಾ: ಪಂಜಾಬ್ನ ಎಲ್ಲ 13 ಲೋಕಸಭಾ ಸ್ಥಾನಗಳನ್ನು ಮತ್ತು ಚಂಡೀಗಢ ಲೋಕಸಭಾ ಸ್ಥಾನವನ್ನು ಆಮ್ ಆದ್ಮಿ ಪಕ್ಷ ಗೆಲ್ಲಲು ಜನ ನೆರವಾಗಬೇಕು ಎಂದು ಪಕ್ಷದ ಮುಖಂಡ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪಕ್ಷ, ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷವಾಗಿ ಸ್ಪರ್ಧಿಸದೇ ಏಕಾಂಗಿಯಾಗಿ ಹೋರಾಡುವ ಸುಳಿವು ನೀಡಿದ್ದಾರೆ.

ಪ್ರಸಕ್ತ ಲೋಕಸಭೆಯಲ್ಲಿ ಇಂಡಿಯಾ ಮೈತ್ರಿಕೂಟ ಒಂಬತ್ತು ಸ್ಥಾನಗಳನ್ನು ಪಂಜಾಬ್ನಲ್ಲಿ ಹೊಂದಿದ್ದು, ಕಾಂಗ್ರೆಸ್ 8 ಹಾಗೂ ಎಎಪಿ ಒಂದು ಸ್ಥಾನ ಗಳಿಸಿವೆ. ಆದಾಗ್ಯೂ ಭಟಿಂಡಾದಲ್ಲಿ ನಡೆದ ವಿಕಾಸ ಕ್ರಾಂತಿ ರ್ಯಾಲಿಯಲ್ಲಿ ಮಾತನಾಡಿದ ಅವರು, 1125 ಕೋ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಘೋಷಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೂಡಾ ಪ್ರತಿಸ್ಪರ್ಧಿ ಎಂದು ಬಣ್ಣಿಸಿದರು.

ಒಂದೇ ಉಸಿರಿನಲ್ಲಿ ಬಿಜೆಪಿ, ಅಕಾಲಿದಳ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಅಕಾಲಿ, ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರಗಳು ಎಂದೂ ಒಂದೇ ಬಾತಿಗೆ 1125 ಕೋಟಿ ರೂಪಾಯಿಗಳ ಅಭಿವೃದ್ಧಿ ಪ್ಯಾಕೇಜ್ ಹಂಚಿಕೆ ಮಾಡಿದ್ದಿಲ್ಲ" ಎಂದು ಹೇಳಿದರು.

ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡರೆ ಚುನಾವಣೆಯಲ್ಲಿ ತಾವು ನಾಮಾವಶೇಷವಾಗುತ್ತೇವೆ ಎಂಬ ಭೀತಿಯಿಂದ ಪಂಜಾಬ್ಗೆ ಎಲ್ಲ ಅನುದಾನವನ್ನು ನಿಲ್ಲಿಸುವಂತೆ ಕೇಂದ್ರವನ್ನು ಒತ್ತಾಯಿಸುವಲ್ಲಿ ಎಲ್ಲ ಪಕ್ಷಗಳು ಕೈಜೋಡಿಸಿವೆ ಎಂದು ಆಪಾದಿಸಿದ ಅವರು, "ಪಂಜಾಬ್ನಲ್ಲಿ ನಮ್ಮ ಸರ್ಕಾರದ ಕಾರ್ಯಗಳ ಬಗ್ಗೆ ಜನತೆಗೆ ಸಂತಸವಿದೆ. ನಾವು ಎಲ್ಲ 13 ಲೋಕಸಭಾ ಸ್ಥಾನಗಳನ್ನು ಗೆಲ್ಲುವಂತೆ ಮಾಡುತ್ತಾರೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News