ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಕಾಂಗ್ರೆಸ್ ಮುಖ್ಯಸ್ಥ
Update: 2024-04-05 09:33 GMT
ಗುವಾಹಟಿ: ಅಸ್ಸಾಂ ಮಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ನೀಡಿರುವ ವಿವಿಧ ಹೇಳಿಕೆಗಳಿಂದ ತನಗೆ ಹಾಗೂ ತನ್ನ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರು ಹಿಮಂತ್ ಬಿಸ್ವಾ ಶರ್ಮ ವಿರುದ್ಧ ಸ್ಥಳೀಯ ನ್ಯಾಯಾಲಯವೊಂದರಲ್ಲಿ ರೂ. 10 ಕೋಟಿ ಮಾನಹಾನಿ ಮೊಕದ್ದಮೆಯನ್ನು ಹೂಡಿದ್ದಾರೆ.
ಗುರುವಾರ ಕಮ್ರೂಪ್ ಮೆಟ್ರೊದಲ್ಲಿರುವ ಸಿವಿಲ್ ನ್ಯಾಯಾಧೀಶದ ನ್ಯಾಯಾಲಯ (ಹಿರಿಯ ವಿಭಾಗ) ಹಾಗೂ ಸಹಾಯಕ ಸೆಷನ್ಸ್ ನ್ಯಾಯಾಧೀಶ 1ರ ಎದುರು ಬೋರಾ ಪ್ರಕರಣ ದಾಖಲಿಸಿದ್ದಾರೆ.
ಶರ್ಮ ಅಲ್ಲದೆ ರಾಜ್ಯದಲ್ಲಿನ ಸ್ಥಳೀಯ ಭಾಷೆಯ ಮುಂಚೂಣಿ ದಿನಪತ್ರಿಕೆ ಹಾಗೂ ಅದರ ಸಂಪಾದಕರನ್ನೂ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.
ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥನಾಗಿರುವ ನಾನು ಪಕ್ಷ ತೊರೆಯುತ್ತೇನೆ ಎಂದು ಹಲವಾರು ಸಂದರ್ಭಗಳಲ್ಲಿ ಹಿಮಂತ ಬಿಸ್ವ ಶರ್ಮ ಹೇಳಿಕೆ ನೀಡಿರುವುದರಿಂದ ನನಗೆ ಹಾಗೂ ನನ್ನ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಬೋರಾ ಆರೋಪಿಸಿದ್ದಾರೆ.