ನಿರಂಕುಶಾಧಿಕಾರ ದೇಶಕ್ಕೆ ಹಾನಿಕರ: ಉದ್ಧವ್ ಠಾಕ್ರೆ

Update: 2024-04-13 17:05 GMT

ಉದ್ಧವ್ ಠಾಕ್ರೆ | PC : PTI 

ಮುಂಬೈ: ನಿರಂಕುಶಾಧಿಕಾರ ದೇಶಕ್ಕೆ ಹಾನಿಕರ. ಆದುದರಿಂದ ದೇಶಕ್ಕೆ ಸಮ್ಮಿಶ್ರ ಸರಕಾರ ಅಗತ್ಯ. ಈ ಹಿಂದೆ ಸಮ್ಮಿಶ್ರ ಸರಕಾರ ಯಶಸ್ವಿಯಾಗಿ ಆಡಳಿತ ನಡೆಸಿದೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.

ಮುಂಬೈಯಲ್ಲಿರುವ ತನ್ನ ನಿವಾಸ ‘ಮಾತೋಶ್ರೀ’ಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಜಲಗಾಂವ್ ಜಿಲ್ಲೆಯಿಂದ ಬಿಜೆಪಿ, ಬಿಆರ್‌ಎಸ್ ಹಾಗೂ ವಿಬಿಎಯ ಪದಾಧಿಕಾರಿಗಳು ತನ್ನ ಪಕ್ಷ ಸೇರಿದ್ದಾರೆ. ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಸಮಾಧಾನ ಗೋಚರಿಸುತ್ತಿದೆ ಎಂದರು.

‘‘ನಿರಂಕುಶಾಧಿಕಾರ ದೇಶಕ್ಕೆ ಹಾನಿಕರ. ಒಂದು ಕಾಲದಲ್ಲಿ ಸಮ್ಮಿಶ್ರ ಸರಕಾರ ಬೇಡ ಎಂಬ ಭಾವನೆ ಇತ್ತು. ಆದರೆ, ಪಿ.ವಿ.ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಸಮ್ಮಿಶ್ರ ಸರಕಾರವನ್ನು ಉತ್ತಮವಾಗಿ ನಡೆಸಿದರು’’ ಎಂದು ಅವರು ಹೇಳಿದರು.

‘‘ಕೆಲವು ವಿನಾಯತಿಗಳನ್ನು ಹೊರತುಪಡಿಸಿದರೆ ಉಳಿದಂತೆ ದೇಶದಲ್ಲಿ ಸಮ್ಮಿಶ್ರ ಸರಕಾರ ಉತ್ತಮ ಆಡಳಿತ ನೀಡಿದೆ. ನಾವು ಬಲಿಷ್ಠ ದೇಶ ಹಾಗೂ ಸಮ್ಮಿಶ್ರ ಸರಕಾರವನ್ನು ಬಯಸುತ್ತೇವೆ. ನಾವು ಬಲಿಷ್ಠ ನಾಯಕನನ್ನು ಬಯಸುತ್ತೇವೆ. ಆದರೆ, ಎಲ್ಲರನ್ನೂ ಕರೆದುಕೊಂಡು ಮುಂದೆ ಹೋಗುವವರು ಬೇಕಿದೆ’’ ಎಂದು ಅವರು ತಿಳಿಸಿದ್ದಾರೆ.

ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟ ಸಮ್ಮಿಶ್ರ ಸರಕಾರವನ್ನು ನೀಡಬಲ್ಲದು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News