ಜಂಗಲ್ ರಾಜ್’ನಲ್ಲಿ ಮಹಿಳೆಯಾಗಿರುವುದು ಅಪರಾಧ | ಕಾನ್ಪುರ ಅತ್ಯಾಚಾರ ಪ್ರಕರಣದ ಕುರಿತು ಉತ್ತರ ಪ್ರದೇಶ ಸರಕಾರಕ್ಕೆ ಪ್ರಿಯಾಂಕಾ ತರಾಟೆ

Update: 2024-03-07 15:14 GMT

ಪ್ರಿಯಾಂಕಾ ಗಾಂಧಿ | Photo: ANI 

ಹೊಸದಿಲ್ಲಿ: ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಕುರಿತಂತೆ ಉತ್ತರಪ್ರದೇಶದ ಬಿಜೆಪಿ ಸರಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘‘ಈ ಜಂಗಲ್ ರಾಜ್ಯದಲ್ಲಿ ಮಹಿಳೆಯಾಗಿರುವುದು ಅಪರಾಧವಾಗಿದೆ’’ ಎಂದಿದ್ದಾರೆ.

ಕಾನ್ಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಇಬ್ಬರು ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡರು. ಈಗ ಅವರ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ರಾಜಿ ಮಾಡಿಕೊಳ್ಳುವಂತೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯರ ಕುಟುಂಬದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘‘ಉತ್ತರಪ್ರದೇಶದಲ್ಲಿ ಸಂತ್ರಸ್ತ ಬಾಲಕಿಯರು ಹಾಗೂ ಮಹಿಳೆಯರು ನ್ಯಾಯ ಕೇಳಿದರೆ, ಅವರ ಕುಟುಂಬವನ್ನು ನಾಶಮಾಡುವ ನಿಯಮ ಅಲ್ಲಿದೆ. ಉನ್ನಾವೊ, ಹಾಥರಸ್ನಿಂದ ಕಾನ್ಪುರದ ವರೆಗೆ ಎಲ್ಲೆಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆಯೋ ಅಲ್ಲೆಲ್ಲ ಅವರ ಕುಟುಂಬಗಳನ್ನು ನಾಶಪಡಿಸಲಾಗಿದೆ’’ ಎಂದು ಅವರು ಆರೋಪಿಸಿದರು.

ಈ ರಾಜ್ಯದ ಕೋಟ್ಯಂತರ ಮಹಿಳೆಯರು ಏನು ಮಾಡಬೇಕು. ಅವರು ಎಲ್ಲಿ ಹೋಗಬೇಕು ಎಂದು ಮೇನಕಾ ಗಾಂಧಿ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News