ಹಿರಿಯ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ನಿಧನ

Update: 2024-08-04 06:10 GMT

ಯಾಮಿನಿ ಕೃಷ್ಣಮೂರ್ತಿ (Credit: ntvenglish.com)

ಹೊಸದಿಲ್ಲಿ: ಹಿರಿಯ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯಪಟು ಯಾಮಿನಿ ಕೃಷ್ಣಮೂರ್ತಿ ದಿಲ್ಲಿಯ ಅಪೊಲೊ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

“ವೃದ್ಧಾಪ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದ ಏಳು ತಿಂಗಳಿನಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು” ಎಂದು ಅವರ ವ್ಯವಸ್ಥಾಪಕ ಹಾಗೂ ಕಾರ್ಯದರ್ಶಿ ಗಣೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅವರು ಇಬ್ಬರು ಸೋದರಿಯರನ್ನು ಅಗಲಿದ್ದು, ಅವರ ಅಂತ್ಯ ಸಂಸ್ಕಾರದ ವಿವರಗಳಿನ್ನೂ ಸಾರ್ವಜನಿಕವಾಗಿ ಬಹಿರಂಗಗೊಂಡಿಲ್ಲ.

ಯಾಮಿನಿ ಕೃಷ್ಣಮೂರ್ತಿ ಅವರು 1968ರಲ್ಲಿ ಪದ್ಮಶ್ರೀ ಪ್ರಶಸ್ತಿ, 1977ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2001ರಲ್ಲಿ ಪದ್ಮ ಭೂಷಣ ಹಾಗೂ 2016ರಲ್ಲಿ ದೇಶದ ಎರಡನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣಕ್ಕೆ ಪಾತ್ರರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News