ಬಿಹಾರ | ನಾಲ್ಕನೇ ಸೇತುವೆ ಕುಸಿತ

Update: 2024-06-27 15:49 GMT

PC : PTI 

ಪಾಟ್ನಾ: ಬಿಹಾರದ ಕೃಷ್ಣಗಂಜ್ ಜಿಲ್ಲೆಯಲ್ಲಿ ಗುರುವಾರ ಸೇತುವೆಯೊಂದು ಕುಸಿದು ಬಿದ್ದಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಸೇತುವೆ ಕುಸಿತದ ನಾಲ್ಕನೇ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಬಹದ್ದೂರ್ಗಂಜ್ ಹಾಗೂ ದಿಘಾಲ್ಬ್ಯಾಂಕ್ ಬ್ಲಾಕ್ಗಳನ್ನು ಸಂಪರ್ಕಿಸುವ ಕಂಕಾಯಿ ನದಿಯ ಉಪನದಿಗೆ ನಿರ್ಮಾಣ ಮಾಡಲಾದ 70 ಮೀಟರ್ ಉದ್ದದ ಸೇತುವೆಯಾಗಿದೆ. ಸೇತುವೆ ಕುಸಿತದಿಂದ ಎರಡು ಪಟ್ಟಣಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಘಟನೆಯಲ್ಲಿ ಯಾರೊಬ್ಬರಿಗೂ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ತೀವ್ರ ಪ್ರವಾಹದ ಕಾರಣದಿಂದ ಸೇತುವೆಯ ಮಧ್ಯ ಭಾಗದ ಹಲವು ಕಂಬಗಳು ಸುಮಾರು ಒಂದೂವರೆ ಅಡಿ ಮುಳುಗಿದೆ ಎಂದು ಅವರು ಹೇಳಿದ್ದಾರೆ.

ಘಟನೆಯ ಕುರಿತು ಮಾಹಿತಿ ಸ್ವೀಕರಿಸಿದ ಬಹಾದ್ದೂರ್ಗಂಜ್ ಪೊಲೀಸ್  ಠಾಣೆಯ ವರಿಷ್ಠ ಅಭಿನವ್ ಪರಾಸರ್ ತನ್ನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ವಾಹನಗಳ ಸಂಚಾರವನ್ನು ತಡೆಯಲು ಕೂಡಲೇ ಎರಡು ಕಡೆಯಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ. ರಸ್ತೆ ಇಲಾಖೆ ಕೂಡ ಸ್ಥಳಕ್ಕೆ ಧಾವಿಸಿದೆ ಹಾಗೂ ಘಟನೆ ಕುರಿತು ತನಿಖೆ ನಡೆಸುತ್ತಿದೆ.

ಸೇತುವೆ ನಿರ್ಮಾಣ ಮಾಡಿ ಕೇವಲ 6 ವರ್ಷಗಳಾಗಿವೆ ಎಂದು    ಸ್ಥಳೀಯರು ತಿಳಿಸಿದ್ದಾರೆ. ಸೇತುವೆಯನ್ನು ಕಂಕಾಯಿ ನದಿಯೊಂದಿಗೆ ಮಹಾನಂದ ನದಿಯನ್ನು ಜೋಡಿಸುವ ಉಪನದಿ ಮದಿಯಾದ ಮೇಲೆ 2011ರಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ನೇಪಾಳದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿದಿರುವುದು ಇದ್ದಕ್ಕಿದ್ದಂತೆ ನೀರಿನ ಮಟ್ಟದಲ್ಲಿ ಏರಿಕೆಯಾಗಲು ಕಾರಣವಾಯಿತು. ಸೇತುವೆಯ ಒಂದು ಕಂಬ ತೀವ್ರವಾದ ಪ್ರವಾಹವನ್ನು ತಡೆಯಲು ವಿಫಲವಾಯಿತು  ಎಂದು ಜಿಲ್ಲಾಧಿಕಾರಿ ತುಷಾರ್ ಸಿಂಗ್ ಹೇಳಿದ್ದಾರೆ.

ಮೊದಲು  ಸಿವಾನ್ ಹಾಗೂ ಅರಾರಿಯಾ ಜಿಲ್ಲೆಗಳಲ್ಲಿ ಸೇತುವೆ ಕುಸಿತದ ಮೂರು ಘಟನೆಗಳು ವರದಿಯಾದ್ದವು. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಘಟನೆಗಳು ಸಂಭವಿಸಿವೆ. ಇದು ರಾಜ್ಯ   ಸರಕಾರದ ಕಾಮಗಾರಿಯ ಗುಣಮಟ್ಟದ ಕುರಿತು ಪ್ರಶ್ನೆ ಉದ್ಬವಿಸುವಂತೆ ಮಾಡಿದೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News