ಶಾಸಕರಾಗಿ ಆಯ್ಕೆಯಾಗಿ ಸಂಸದ ಸ್ಥಾನ ತೊರೆದ ಬಿಜೆಪಿ ಸದಸ್ಯರಿಗೆ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಸೂಚನೆ

Update: 2023-12-08 09:39 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಇತ್ತೀಚೆಗೆ ನಡೆದ ವಿಧಾನಸಭಾ ಚನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದ ನಂತರ ರಾಜೀನಾಮೆ ನೀಡಿದ್ದ ಬಿಜೆಪಿಯ ಸಂಸದರಿಗೆ ದಿಲ್ಲಿಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಗಳನ್ನು 30 ದಿನಗಳೊಳಗೆ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು indiatoday.in ವರದಿ ಮಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕೇಂದ್ರ ಸಚಿವರುಗಳಾದ ನರೇಂದ್ರ ಸಿಂಗ್‌ ತೋಮರ್‌ ಮತ್ತು ಪ್ರಹ್ಲಾದ್‌ ಪಟೇಲ್‌ ಸಹಿತ ಒಂಬತ್ತು ಬಿಜೆಪಿ ಸಂಸದರ ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಗುರುವಾರ ಹೇಳಿದ್ದರು.

ತೋಮರ್‌ ಹಾಗೂ ಪಟೇಲ್‌ ಹೊರತಾಗಿ ಮಧ್ಯ ಪ್ರದೇಶದ ರಾಕೇಶ್‌ ಸಿಂಗ್‌ ರಿತಿ ಪಾಠಕ್‌, ಉದಯ ಪ್ರತಾಪ್‌ ಸಿಂಗ್, ರಾಜಸ್ಥಾನದ ದಿಯಾ ಕುಮಾರಿ ಮತ್ತು ರಾಜ್ಯವರ್ಧನ್‌ ಸಿಂಗ್‌ ರಾಥೋರ್‌ ಮತ್ತು ಛತ್ತೀಸಗಢದ ಗೋಮತಿ ಸಾಯಿ ಮತ್ತು ಅರುನ್‌ ಸಾವೊ ರಾಜೀನಾಮೆ ನೀಡಿದ್ದರು. ಶಾಸಕರಾಗಿ ಆಯ್ಕೆಯಾದ ರಾಜ್ಯಸಭಾ ಸಂಸದ ಕಿರೋಡಿ ಲಾಲ್‌ ಮೀನಾ ಕೂಡಾ ರಾಜೀನಾಮೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News