ಮತ್ತೊಂದು ದಿಲ್ಲಿ ಶಾಲೆಗೆ ಬಾಂಬ್ ಬೆದರಿಕೆ
Update: 2024-12-14 15:04 GMT
ಹೊಸದಿಲ್ಲಿ : ದಿಲ್ಲಿಯ ಆರ್.ಕೆ.ಪುರಂ ದಿಲ್ಲಿ ಪಬ್ಲಿಕ್ ಸ್ಕೂಲ್‌ಗೆ ಶನಿವಾರ ಬಾಂಬ್ ಬೆದರಿಕೆ ಬಂದಿದ್ದು, ಇದು ಈ ವಾರ ರಾಷ್ಟ್ರ ರಾಜಧಾನಿಯಲ್ಲಿನ ಶಾಲೆಗಳಿಗೆ ಇ-ಮೇಲ್ ಬೆದರಿಕೆಗಳನ್ನು ಕಳುಹಿಸಿದ ಮೂರನೇ ಘಟನೆಯಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ,ಸ್ಥಳೀಯ ಪೋಲಿಸರು, ಶ್ವಾನ ದಳಗಳು ಮತ್ತು ಬಾಂಬ್ ಪತ್ತೆ ತಂಡಗಳು ಆಮೂಲಾಗ್ರ ಶೋಧ ಕಾರ್ಯಾಚರಣೆ ನಡೆಸಿದ್ದು,ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಲಿಲ್ಲ. ಶುಕ್ರವಾರ ಸುಮಾರು 30 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು.
ಅದಕ್ಕೂ ಮುನ್ನ ಸೋಮವಾರ ಕನಿಷ್ಠ 44 ಶಾಲೆಗಳು ಇಂತಹುದೇ ಬೆದರಿಕೆ ಇ-ಮೇಲ್‌ಗಳನ್ನು ಸ್ವೀಕರಿಸಿದ್ದವು. ಶೋಧ ಕಾರ್ಯಾಚರಣೆಗಳ ಬಳಿಕ ಅವೆಲ್ಲವೂ ಹುಸಿ ಬೆದರಿಕೆಗಳು ಎನ್ನುವುದು ಸಾಬೀತಾಗಿತ್ತು.