ಕನ್ಯಾಕುಮಾರಿಯ ಧ್ಯಾನ ಮಂಟಪದಲ್ಲಿ ಪ್ರಧಾನಿಯ ಧ್ಯಾನವನ್ನು ವಿವಿಧ ಕೋನಗಳಿಂದ ಸೆರೆಹಿಡಿದ ಕ್ಯಾಮರಾಗಳು

Update: 2024-05-31 07:28 GMT

Photo credit: ANI

ಕನ್ಯಾಕುಮಾರಿ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್‌ ಮೆಮೋರಿಯಲ್‌ನ ಧ್ಯಾನ ಮಂಟಪದಲ್ಲಿ ಗುರುವಾರ ಸಂಜೆಯಿಂದ ಧ್ಯಾನ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋವೊಂದು ಈಗ ಹೊರಬಿದ್ದಿದ್ದು ಅದರಲ್ಲಿ ವಿವಿಧ ಕೋನಗಳಿಂದ ಕ್ಯಾಮರಾಗಳು ಪ್ರಧಾನಿಯ ಧ್ಯಾನವನ್ನು ಚಿತ್ರೀಕರಿಸಿರುವುದು ಕಾಣಿಸುತ್ತದೆ.

ಪ್ರಧಾನಿಯ ಯುಟ್ಯೂಬ್‌ ಪೇಜ್‌ ನಲ್ಲಿ ಈ ವೀಡಿಯೋ ಪೋಸ್ಟ್‌ ಮಾಡಲಾಗಿದೆ, ಧ್ಯಾನ ಮಂಟಪದಲ್ಲಿ ಹಿನ್ನೆಲೆಯಲ್ಲಿ ಹಸಿರು ಬೆಳಕು ಹೊಂದಿರುವ ಓಂ ಚಿಹ್ನೆಯೂ ಕಾಣಿಸುತ್ತಿದೆ.

ಮೋದಿ ಧ್ಯಾನ ಮಂಟಪದಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಲೋಕಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಅಂತ್ಯಗೊಂಡ ಬೆನ್ನಲ್ಲೇ ಮೋದಿ ಗುರುವಾರ ಸಂಜೆ ಕನ್ಯಾಕುಮಾರಿಗೆ ಆಗಮಿಸಿದ್ದರು. ಅಲ್ಲಿ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ತಿರುವಲ್ಲುವರ್‌, ರಾಮಕೃಷ್ಣ ಪರಮಹಂಸ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದ ಅವರ ಪ್ರತಿಮೆಗಳಿಗೆ ಗೌರವ ಸಲ್ಲಿಸಿ ಬಳಿಕ ಧ್ಯಾನ ಮಂಟಪಕ್ಕೆ ತೆರಳಿ ಧ್ಯಾನ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News