ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧನ ವಿಸ್ತರಿಸಲು ಅಸಾಧ್ಯ: ಅಲಹಾಬಾದ್ ಹೈಕೋರ್ಟ್

Update: 2024-02-25 07:25 GMT

ಸಾಂದರ್ಭಿಕ ಚಿತ್ರ 

ಪ್ರಯಾಗ್‍ರಾಜ್: ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‍ಎಸ್‍ಎ)-1980 ಅಡಿಯಲ್ಲಿ, ಆ ಕಾಯ್ದೆಯ ದೃಢೀಕರಣ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಸಮಯಕ್ಕಿಂತ ಹೆಚ್ಚು ಅವಧಿಗೆ ಸರ್ಕಾರ ಬಂಧನವನ್ನು ಪರಾಮರ್ಶಿಸುವಂತಿಲ್ಲ ಅಥವಾ ವಿಸ್ತರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ ಎಂದು timesofindia ವರದಿ ಮಾಡಿದೆ.

ಬಂಧನವನ್ನು ಮತ್ತಷ್ಟು ಅವಧಿಗೆ ವಿಸ್ತರಿಸಬೇಕಿದ್ದರೆ ಹೊಸ ಆದೇಶ ಅಗತ್ಯವಾಗುತ್ತದೆ ಎಂದು ಹೇಳಿದ ನ್ಯಾಯಾಲಯ, ಎನ್‍ಎಸ್‍ಎ ಅಡಿಯಲ್ಲಿ ಬಂಧನದಲ್ಲಿದ್ದ ವ್ಯಕ್ತಿಯ ಬಂಧನವನ್ನು ಹಲವು ಅವಧಿಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಕಾನ್ಪುರದ ಮುಹಮ್ಮದ್ ಅಸೀಂ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ವಿಭಾಗೀಯ ಪೀಠ, "2023ರ ಮೇ 9ರಂದು ದೃಢೀಕರಣ ಆದೇಶವನ್ನು ನೀಡಲಾಗಿತ್ತು. ಆ ಮೂಲಕ ಅರ್ಜಿದಾರರನ್ನು 2023ರ ಎಪ್ರಿಲ್ 20ರಿಂದ ಮೂರು ತಿಂಗಳ ಅವಧಿಗೆ ಬಂಧನದಲ್ಲಿಡಲು ಆದೇಶಿಸಲಾಗಿತ್ತು" ಎಂದು ಸ್ಪಷ್ಟಪಡಿಸಿದೆ.

ಈ ಅವಧಿ ಮುಗಿದ ಬಳಿಕ ಅರ್ಜಿದಾರರ ಬಂಧನವು ಕಾನೂನು ಬಾಹಿರವಾಗುತ್ತದೆ ಹಾಗೂ ಬಿಡುಗಡೆಗೆ ಅರ್ಹನಾಗುತ್ತಾನೆ ಎಂದು ಹೈಕೋರ್ಟ್ ಹೇಳಿದೆ.

ಸರ್ಕಾರ ಬಂಧನ ಆದೇಶವನ್ನು ಪರಾಮರ್ಶಿಸಲು ಅಥವಾ ವಿಸ್ತರಿಸಲು ಅಧಿಕಾರವನ್ನು'Can't extend NSA detention, need new order': Allahabad high court ಹೊಂದಿಲ್ಲವಾದ್ದರಿಂದ ಬಂಧನವನ್ನು ಮೂರು ತಿಂಗಳಿಗಿಂತ ಹೆಚ್ಚು ಅವಧಿಗೆ ವಿಸ್ತರಿಸುವ ಆದೇಶ ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News