ಮಹಾತ್ಮಾ ಗಾಂಧಿ ವಂಶಾವಳಿ ಪ್ರಶ್ನಿಸಿದ್ದ ಹಿಂದುತ್ವ ನಾಯಕ ಸಂಭಾಜಿ ಭಿಡೆ ವಿರುದ್ಧ ಪ್ರಕರಣ
Update: 2023-07-29 17:03 GMT
ಅಮರಾವತಿ (ಮಹಾರಾಷ್ಟ್ರ): ಮಹಾತ್ಮಾ ಗಾಂಧಿಯವರ ವಂಶಾವಳಿಯನ್ನು ಪ್ರಶ್ನಿಸಿದ್ದಕ್ಕಾಗಿ ಮೂಲಭೂತವಾದಿ ಹಿಂದುತ್ವ ನಾಯಕ ಸಂಭಾಜಿ ಭಿಡೆ ವಿರುದ್ಧ ಇಲ್ಲಿಯ ಪೊಲೀಸರು ಶನಿವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ತನ್ನ ವಿದರ್ಭ ಪ್ರವಾಸದ ಸಂದರ್ಭದಲ್ಲಿ ಅಮರಾವತಿಯಲ್ಲಿ ಜನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಭಿಡೆ,‘ಮಹಾತ್ಮಾ ಗಾಂಧಿಯವರ ಹೆಸರು ಮೋಹನದಾಸ ಕರಮಚಂದ್ ಗಾಂಧಿ ಎಂದು ಹೇಳಲಾಗಿದೆ, ಆದರೆ ಕರಮಚಂದ್ ಗಾಂಧಿ ಮಹಾತ್ಮಾ ಗಾಂಧಿಯವರ ತಂದೆಯಾಗಿರಲಿಲ್ಲ. ಅವರ ನಿಜವಾದ ತಂದೆ ಓರ್ವ ಮುಸ್ಲಿಮ್ ಜಮೀನುದಾರ. ಈ ಮುಸ್ಲಿಮ್ ಜಮೀನುದಾರನ ಬಳಿ ಕೆಲಸ ಮಾಡುತ್ತಿದ್ದ ಕರಮಚಂದ್ ಆತನನ್ನು ವಂಚಿಸಿ ಪರಾರಿಯಾಗಿದ್ದರು.
ಇದರಿಂದ ಕ್ರುದ್ಧಗೊಂಡಿದ್ದ ಮುಸ್ಲಿಮ್ ಜಮೀನುದಾರ ಕರಮಚಂದ್ರ ಪತ್ನಿಯನ್ನು ಬಲಾತ್ಕಾರದಿಂದ ತಂದು ತನ್ನ ಮನೆಗೆ ಕರೆತಂದಿದ್ದ ’ ಎಂದು ಹೇಳಿದ್ದರು.