ಆ್ಯಪಲ್ ಉತ್ಪನ್ನಗಳ ಮೇಲೆ ಸೈಬರ್ ದಾಳಿ ಅಪಾಯ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Update: 2024-08-04 08:53 GMT

ಹೊಸದಿಲ್ಲಿ: ಐಫೋನ್, ಐಪ್ಯಾಡ್ ಮತ್ತಿತರ ಆ್ಯಪಲ್ ಉತ್ಪನ್ನಳ ಮೇಲೆ ಹಲವು ಸೈಬರ್ ದಾಳಿಗಳು ನಡೆಯುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಸಾಧನಗಳಿಂದ ಸೂಕ್ಷ್ಮ ಮತ್ತು ಮಹತ್ವದ ಮಾಹಿತಿಗಳನ್ನು ಸೋರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ (ಸಿಇಆರ್‍ಟಿ-ಇನ್) ಈ ಬಗ್ಗೆ ಅಧಿಕೃತ ಪ್ಲಾಟ್‍ಫಾರಂನಲ್ಲಿ ಎಚ್ಚರಿಕೆ ನೀಡಿ, ತೀವ್ರಸ್ವರೂಪದ ದಾಳಿಯ ಸಾಧ್ಯತೆ ಇದೆ ಎಂದು ಹೇಳಿದೆ.

ಆಗಸ್ಟ್ 2ರಂದು ನೀಡಿರುವ ಹೇಳಿಕೆಯಲ್ಲಿ, "ಆ್ಯಪಲ್ ಉತ್ಪನ್ನಗಳು ಹಲವು ಸೈಬರ್ ದಾಳಿಗಳಿಗೆ ತುತ್ತಾಗುವ ಅಪಾಯವಿದೆ. ಈ ಮೂಲಕ ದಾಳಿಕೋರರು ಸೂಕ್ಷ್ಮ ಮಾಹಿತಿಗಳನ್ನು ಕದಿಯುವ ಅಪಾಯವಿದ್ದು, ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಿ ಈ ದಾಳಿ ನಡೆಸುವ ಕಾರಣದಿಂದ ಸೇವೆಯ ನಿರಾಕರಣೆ ಸಾಧ್ಯತೆ ಇದೆ. ನಿಗದಿತ ವ್ಯವಸ್ಥೆಗಳ ಮೇಲೆ ಗುರಿ ಮಾಡಿ ಈ ದಾಳಿ ನಡೆಯಲಿದೆ ಎಂದು ಎಚ್ಚರಿಸಿದೆ.

ಆ್ಯಪಲ್ ಸಾಫ್ಟ್ ವೇರ್ ಗಳಾದ ಐಒಎಸ್ ಮತ್ತು ಐಪ್ಯಾಡ್‍ಓಎಸ್‍ನ 17.6 ಮತ್ತು 17.7.9ಕ್ಕಿಂತ ಹಿಂದಿನ ಅವತರಣಿಕೆಗಳ ಮೇಲೆ ನಡೆಯುವ ಸಾಧ್ಯತೆಯನ್ನು ಅಂದಾಜಿಸಿದೆ. ಜತೆಗೆ ಮ್ಯಾಕ್ ಒಎಸ್ ಸೊನೋಮಾದಿಂದ 13.6.8ಕ್ಕಿಂತ ಪೂರ್ವದ 14.6 ಮ್ಯಾಕ್‍ಒಎಸ್ ವೆಂಚುರಾ ವರ್ಷನ್‍ಗಳ ವರೆಗೆ, 12.7.6ಕ್ಕಿಂತ ಹಿಂದಿನ ಮ್ಯಾಕ್ ಒಎಸ್ ಮಾನಿಟರಿ ವರ್ಷನ್‍ಗಳ ಮೇಲೆ ದಾಳಿ ನಡೆಯಲಿದೆ ಎಂದು ಅಂದಾಜಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News