ರಾಜನಾಥ್ ಸಿಂಗ್ ಪರವಾಗಿ ಅಜ್ಮೇರ್ ದರ್ಗಾಗೆ ಚಾದರ ಅರ್ಪಣೆ
Update: 2025-01-05 14:22 GMT
ಜೈಪುರ: ಸೂಫಿ ಸಂತ ಕ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್ ಅಂಗವಾಗಿ ರವಿವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪರವಾಗಿ ಜೈಪುರದ ಅಜ್ಮೇರ್ ಶರೀಫ್ ದರ್ಗಾಗೆ ಚಾದರವನ್ನು ಅರ್ಪಿಸಲಾಯಿತು.
ರಾಜನಾಥ್ ಸಿಂಗ್ ಪರವಾಗಿ ದರ್ಗಾ ಸಮಿತಿಯ ಮಾಜಿ ಉಪಾಧ್ಯಕ್ಷ ಮುನಾವ್ವರ್ ಖಾನ್ ಸಮಾಧಿಗೆ ಚಾದರವನ್ನು ಅರ್ಪಿಸಿದರು.
ಇದಲ್ಲದೆ, ರಾಜನಾಥ್ ಸಿಂಗ್ ಕಳಿಸಿದ್ದ ಸಂದೇಶವನ್ನೂ ಖಾನ್ ಓದಿ ಹೇಳಿದರು. ಆ ಸಂದೇಶದಲ್ಲಿ ಭ್ರಾತೃತ್ವದ ಕರೆ ನೀಡಲಾಗಿದ್ದು, ಉರುಸ್ ನಲ್ಲಿ ಎಲ್ಲ ಧರ್ಮ ಹಾಗೂ ಜಾತಿಯ ಜನರು ಗೌರವ ಭಾವದೊಂದಿಗೆ ಭಾಗವಹಿಸಬೇಕು ಎಂದು ಮನವಿ ಮಾಡಲಾಗಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ದರ್ಗಾದಲ್ಲಿ ಚಾದರ ಅರ್ಪಿಸಿದ್ದರು.