ಚಂದ್ರನಿಗೆ ಇನ್ನೂ ಹತ್ತಿರವಾದ ‘ಚಂದ್ರಯಾನ-3’
Update: 2023-08-09 14:36 GMT
ಬೆಂಗಳೂರು: ಚಂದ್ರನ ಮೇಲೆ ಇಳಿಯಲು ಹೋಗುತ್ತಿರುವ ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ- 3’ ಬಾಹ್ಯಾಕಾಶ ನೌಕೆಯನ್ನು ಚಂದ್ರನಿಗೆ ಹತ್ತಿರವಿರುವ ಇನ್ನೊಂದು ಕಕ್ಷೆಗೆ ಬುಧವಾರ ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಜುಲೈ 14ರಂದು ಅದನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾಯಿಸಲಾಗಿತ್ತು. ಆಗಸ್ಟ್ 5ರಂದು ಅದನ್ನು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಸೇರಿಸಲಾಗಿತ್ತು.
‘‘ಚಂದ್ರನ ನೆಲಕ್ಕೆ ಇನ್ನೂ ಹತ್ತಿರವಾಗುತ್ತಿದೆ. ಬುಧವಾರದ ಕಾರ್ಯಾಚರಣೆಯಲ್ಲಿ ಚಂದ್ರಯಾನ-3 ಅನ್ನು 174 x 1437 ಕಿ.ಮೀ. ವ್ಯಾಪ್ತಿಯ ಕಕ್ಷೆಯಲ್ಲಿ ಇರಿಸಲಾಗಿದೆ’’ ಎಂದು ಇಸ್ರೋ ಟ್ವೀಟ್ ಮಾಡಿದೆ.
ಮಂದಿನ ಕಕ್ಷೆ ಬದಲಾವಣೆ ಆಗಸ್ಟ್ 14ರಂದು ನಡೆಯಲಿದೆ.