ಮತ್ತೊಮ್ಮೆ ಚಂದ್ರನ ಮೇಲ್ಮೈಯಲ್ಲಿ 'ಸಾಫ್ಟ್‌ ಲ್ಯಾಂಡ್' ಆದ ವಿಕ್ರಮ್‌ ಲ್ಯಾಂಡರ್‌ !

Update: 2023-09-04 07:15 GMT

Photo: Twitter/@isro

ಹೊಸದಿಲ್ಲಿ: ಚಂದ್ರಯಾನ-3 ಮಿಷನ್‌ ಅಂಗವಾಗಿ ಆಗಸ್ಟ್‌ 23ರಂದು ಚಂದಿರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್‌ ಯಶಸ್ವಿಯಾಗಿ ಕಾಲಿಟ್ಟ ಹಲವು ದಿನಗಳ ನಂತರ ವಿಕ್ರಮ್ ಮತ್ತೊಮ್ಮೆ ಚಂದ್ರನ ಮೇಲ್ಮೈಯಲ್ಲಿ “ಸಾಫ್ಟ್‌ ಲ್ಯಾಂಡ್” ಆಗಿದೆ ಎಂದು ಇಸ್ರೋ ಇಂದು ಹೇಳಿದೆ.

“ವಿಕ್ರಮ್‌ ಲ್ಯಾಂಡರ್‌ ಚಂದ್ರಯಾನ-3 ಮಿಷನ್‌ ಉದ್ದೇಶಗಳನ್ನು ಮೀರಿದೆ ಹಾಗೂ ಯಶಸ್ವಿಯಾಗಿ “ಹಾಪ್‌ ಪ್ರಯೋಗವನ್ನು” ಪೂರ್ಣಗೊಳಿಸಿದೆ,” ಎಂದು ಇಸ್ರೋ ಹೇಳಿದೆ.

“ಆದೇಶದ ಮೇರೆಗೆ ಅದರ ಇಂಜಿನ್‌ಗಳು ಆರಂಭಗೊಂಡು ಅದು 40 ಸೆಂ.ಮೀ ಮೇಲಕ್ಕೆ ಹೋಗಿ ನಿರೀಕ್ಷೆಯಂತೆ ಸುರಕ್ಷಿತವಾಗಿ 30-40 ಸೆಂ.ಮೀ ದೂರದಲ್ಲಿ ಲ್ಯಾಂಡ್‌ ಆಗಿದೆ,” ಎಂದು ಸಂಸ್ಥೆ ಮಾಹಿತಿ ನೀಡಿದೆ.

“ಈ ಸಾಧನೆಯು ಭವಿಷ್ಯದ ಯೋಜನೆಗಳಿಗೆ ಮತ್ತು ಮಾನವ ಮಿಷನ್‌ಗಳಿಗೆ ಪ್ರೇರಣೆಯಾಗಿದೆ,” ಎಂದು ಇಸ್ರೋ ಹೇಳಿದೆ.

ಕಳೆದ ವಾರ ಚಂದ್ರಯಾನ-3 ಮಿಷನ್‌ನ ಪ್ರಜ್ಞಾನ ರೋವರ್‌ ಅನ್ನು”ಸ್ಲೀಪ್‌ ಮೋಡ್‌”ನಲ್ಲಿರಿಸಲಾಯಿತು ಆದರೆ ಅದರ ಬ್ಯಾಟರಿಗಳು ಚಾರ್ಜ್‌ ಆಗುತ್ತಿವೆ ಹಾಗೂ ರಿಸೀವರ್‌ ಆನ್‌ ಆಗಿದೆ ಎಂದು ಇಸ್ರೋ ಹೇಳಿದೆ.

 Chandrayaan-3 Lander Makes A Moon Touchdown, Again

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News