ಚಂದ್ರಯಾನ-3: ಚಂದ್ರನನ್ನು ನೋಡುವ ಹೊಸ ವಿಧಾನ! ಚಂದ್ರನ 3ಡಿ ಗುಣಮಟ್ಟದ ಚಿತ್ರವನ್ನು ಹಂಚಿಕೊಂಡ ಪ್ರಗ್ಯಾನ್ ರೋವರ್

Update: 2023-09-05 17:07 GMT

Photo: twitter/@isro

ಬೆಂಗಳೂರು: ಚಂದ್ರಯಾನ-3 ಯೋಜನೆಯ ಯಶಸ್ಸಿಗೆ ಗಡಿಗಳೇ ಇಲ್ಲ! ಮತ್ತೊಂದು ಗಮನಾರ್ಹ ಸಾಧನೆಯಲ್ಲಿ 3ಡಿ ಪರಿಣಾಮದೊಂದಿಗೆ ಚಂದ್ರನನ್ನು ಸೆರೆ ಹಿಡಿಯುವ ಹೊಸ ವಿಧಾನವನ್ನು ಪ್ರಗ್ಯಾನ್ ರೋವರ್ ಬಳಸಿದೆ. ಈ ವಿಧಾನವು ಅನಗ್ಲಿಫ್ ತಂತ್ರಜ್ಞಾನವನ್ನು ಬಳಸಿಕೊಂಡು ಚಂದ್ರನ ಮೇಲ್ಮೈನ ವಸ್ತುಗಳನ್ನು ಮೂರು ಆಯಾಮದಲ್ಲಿ ಸೆರೆ ಹಿಡಿದಿದೆ ಎಂದು deccanherald.com ವರದಿ ಮಾಡಿದೆ.

ಪುನರಾವರ್ತಿತ ಅಥವಾ ಹಲವು ಕೋನಗಳ ಚಿತ್ರಗಳ ನೆರವಿನೊಂದಿಗೆ ಯಾವುದೇ ವಸ್ತುವನ್ನು ತಲೆಕೆಳಗು ಕೋನದೊಂದಿಗೆ ಸೆರೆ ಹಿಡಿಯುವ ತಂತ್ರಜ್ಞಾನದೊಂದಿಗೆ ಈ 3ಡಿ ಪರಿಣಾಮವನ್ನು ಸೃಷ್ಟಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯವು ಅಭಿವೃದ್ಧಿ ಪಡಿಸಿರುವ ನವ್ ಕ್ಯಾಮ್ ಎಂಬ ಎಲೆಕ್ಟ್ರೊ ಆಪ್ಟಿಕ್ ಸಿಸ್ಟಮ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ರೋವರ್ ಈ ಅನಗ್ಲಿಫ್ ಚಿತ್ರಗಳನ್ನು ಸೃಷ್ಟಿಸಿದೆ.

ಈ ತಂತ್ರಜ್ಞಾನದಲ್ಲಿ, ಚಂದ್ರನ ಎಡ ಮತ್ತು ಬಲ ಪಾರ್ಶ್ವಗಳನ್ನು 3ಡಿ ಪರಿಣಾಮದಲ್ಲಿ ಸೆರೆ ಹಿಡಿದು, ನಂತರ ಅವನ್ನು ವಿಭಿನ್ನ ವರ್ಣದ ವಾಹಿನಿಗಳಲ್ಲಿ ನೆಲೆಗೊಳಿಸಲಾಗುತ್ತದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಇಸ್ರೊ, “ಈ ಮೂರು ವಾಹಿನಿಯ ಚಿತ್ರದಲ್ಲಿ, ಎಡ ಪಾರ್ಶ್ವದ ಚಿತ್ರವನ್ನು ಕೆಂಪು ವಾಹಿನಿಯಲ್ಲಿ ನೆಲೆಗೊಳಿಸಿದರೆ, ಬಲ ಪಾರ್ಶ್ವದ ಚಿತ್ರವನ್ನು ನೀಲಿ ಮತ್ತು ಹಸಿರು ವಾಹಿನಿಗಳಲ್ಲಿ (ಸಯಾನ್ ಬಣ್ಣವನ್ನು ಸೃಷ್ಟಿಸುವ ಮೂಲಕ) ನೆಲೆಗೊಳಿಸಲಾಗುತ್ತದೆ. ಈ ಎರಡು ಚಿತ್ರಗಳ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವು ಪುನರಾವರ್ತಿತ ಫಲಿತಾಂಶವಾಗಿ ಹೊಮ್ಮುತ್ತದೆ. ಇದರಿಂದ ಮೂರು ಕೋನದ ಕಣ್ಣೋಟದ ಅನಿಸಿಕೆಯನ್ನು ನೀಡುತ್ತದೆ” ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News