ಭಾರತ-ಬಾಂಗ್ಲಾ ಗಡಿ ಪರಿಸ್ಥಿತಿ ಅವಲೋಕಿಸಲು ಸಮಿತಿ : ಅಮಿತ್ ಶಾ

Update: 2024-08-09 15:47 GMT

ಅಮಿತ್ ಶಾ | PC : PTI 

ಹೊಸದಿಲ್ಲಿ : ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಪರಿಸ್ಥಿತಿ ಅವಲೋಕಿಸಲು ಕೇಂದ್ರ ಸರಕಾರ ಸಮಿತಿಯೊಂದನ್ನು ರೂಪಿಸಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

‘‘ಬಾಂಗ್ಲಾದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಲು ಮೋದಿ ಸರಕಾರ ಸಮಿತಿ ರೂಪಿಸಿದೆ. ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು, ಹಿಂದೂಗಳು ಹಾಗೂ ಇತರ ಅಲ್ಪ ಸಂಖ್ಯಾತ ಸಮುದಾಯಗಳ ಸುರಕ್ಷೆ ಹಾಗೂ ಭದ್ರತೆಗೆ ಈ ಸಮಿತಿ ಬಾಂಗ್ಲಾದೇಶದಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಸಂವಹನ ನಿರ್ವಹಿಸಲಿದೆ ’’ ಎಂದು ಶಾ ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News