ರಾಜ್ಯಗಳ ಕೃಷಿ ಸಹಕಾರಿ ಬ್ಯಾಂಕುಗಳ ಗಣಕೀಕರಣ : ಕೇಂದ್ರದ ಯೋಜನೆ

Update: 2024-01-29 17:03 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುವ ಪ್ರಯತ್ನವಾಗಿ ಕೃಷಿ ಸಹಕಾರಿ ಕ್ಷೇತ್ರದ ಗಣಕೀಕರಣಕ್ಕೆ ಕೇಂದ್ರವು ಯೋಜಿಸುತ್ತಿದೆ. ದೇಶದಲ್ಲಿಯ ಎಂಟು ಲಕ್ಷ ಸಹಕಾರಿ ಸಂಘಗಳ ರಾಷ್ಟ್ರೀಯ ಡಾಟಾಬೇಸ್ ಬಿಡುಗಡೆಗೊಳಿಸಲೂ ಅದು ಸಜ್ಜಾಗಿದೆ.

ಸಹಕಾರ ಸಚಿವಾಲಯವು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಗಳ ಗಣಕೀಕರಣ ಯೋಜನೆಗೆ ಜ.30ರಂದು ಚಾಲನೆ ನೀಡಲಿದೆ.

ಸಹಕಾರಿ ಕ್ಷೇತ್ರದ ಗಣಕೀಕರಣ ಸುದೀರ್ಘ ಕಾಲದಿಂದಲೂ ಬಾಕಿಯುಳಿದಿದೆ. ಅದು ರೋಗಪೀಡಿತ ಕ್ಷೇತ್ರವನ್ನು ಆಧುನೀಕರಿಸುವ ಜೊತೆಗೆ ಪುನಃಶ್ಚೇತನಗೊಳಿಸುತ್ತದೆ ಎನ್ನುವುದು ಹಲವಾರು ತಜ್ಞರ ಅಭಿಪ್ರಾಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News