ಜಾತಿ ಗಣತಿ ನಡೆಸುವುದು ಕಾಂಗ್ರೆಸ್ ಗ್ಯಾರಂಟಿ: ಜೈರಾಮ್ ರಮೇಶ್

Update: 2024-03-12 15:25 GMT

ಜೈರಾಮ್ ರಮೇಶ್ | Photo: PTI 

ನಂದುರ್ಬಾರ್: ಜಾತಿ ಗಣತಿ ನಡೆಸುವುದು ನಮ್ಮ ಪಕ್ಷದ ಗ್ಯಾರಂಟಿ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಲ್ಲಿ ಮಂಗಳವಾರ ಹೇಳಿದ್ದಾರೆ.

ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ ನಡೆಸುತ್ತೇವೆ ಎಂದು ನಾವು ಗ್ಯಾರಂಟಿ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಮಹಾರಾಷ್ಟ್ರಕ್ಕೆ ಪ್ರವೇಶಿಸುವ ಮುನ್ನ ಅವರು ಹೇಳಿದ್ದಾರೆ.

‘‘ಇದು ನಮ್ಮ ಸಮಾಜದ ಎಕ್ಸ್ರೇ. ಇದು ವಿವಿಧ ಜಾತಿಗಳ ಜನಸಂಖ್ಯೆ ಹಾಗೂ ನಮ್ಮ ದೇಶದ ಸಂಪತ್ತಿನಲ್ಲಿ ಅವರ ಪಾಲನ್ನು ತೋರಿಸುತ್ತದೆ. ಇದು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಅವರ ಪಾಲನ್ನು ಪ್ರತಿಬಿಂಬಿಸುತ್ತದೆ’’ ಎಂದು ಅವರು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News