ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಆರ್ಥಿಕ ಅಸ್ಥಿರತೆ ತರಲು ಬಯಸುತ್ತಿದೆ: ಸೆಬಿ ಮುಖ್ಯಸ್ಥೆಯ ವಿರುದ್ಧದ ಗಂಭೀರ ಆರೋಪಗಳ ಕುರಿತು ವಿಪಕ್ಷಗಳ ಟೀಕೆಗೆ ಬಿಜೆಪಿ ಪ್ರತಿಕ್ರಿಯೆ

Update: 2024-08-12 10:25 GMT

ರವಿಶಂಕರ್‌ ಪ್ರಸಾದ್‌ (PTI)

ಹೊಸದಿಲ್ಲಿ: ಭಾರತದ ಷೇರು ಮಾರುಕಟ್ಟೆ ಕುಸಿಯಬೇಕೆಂದು ಕಾಂಗ್ರೆಸ್‌ ಬಯಸುತ್ತಿದೆ ಎಂದು ಬಿಜೆಪಿಯ ರವಿಶಂಕರ್‌ ಪ್ರಸಾದ್‌ ಇಂದು ಆರೋಪಿಸಿದ್ದಾರೆ. ಹಿಂಡೆನ್‌ಬರ್ಗ್‌ ಸಂಸ್ಥೆಯ ವರದಿ ಸೆಬಿ ಮುಖ್ಯಸ್ಥೆಯ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ ನಂತರ ವಿಪಕ್ಷಗಳ ಟೀಕೆಗಳಿಗೆ ಅವರು ತಿರುಗೇಟು ನೀಡಿದ್ದಾರೆ.

“ಕಾಂಗ್ರೆಸ್‌ ಪಕ್ಷ ಆರ್ಥಿಕ ಅಸ್ಥಿರತೆ ಸೃಷ್ಟಿಸುವಲ್ಲಿ ಹಾಗೂ ಭಾರತದ ವಿರುದ್ಧ ದ್ವೇಷ ಹರಡುವಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ ಅವರು ಭಾರತವು ಸುರಕ್ಷಿತ, ಸ್ಥಿರ ಮತ್ತು ಭರವಸೆಯ ಷೇರು ಮಾರುಕಟ್ಟೆ ಹೊಂದಿದೆ ಎಂದರು.

“ಮೂರನೇ ಬಾರಿ ಸೋಲು ಕಂಡ ನಂತರ ಕಾಂಗ್ರೆಸ್‌ ಮತ್ತು ಅದರ ಆತ್ಮೀಯ ʼಟೂಲ್‌ಕಿಟ್‌ʼ ಮಿತ್ರರು ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಬಯಸುತ್ತಿದ್ದಾರೆ. ಇಂದು ಕಾಂಗ್ರೆಸ್‌ ಪಕ್ಷ ಭಾರತದ ವಿರುದ್ಧ ದ್ವೇಷ ಬೆಳೆಸಿದೆ. ಕಾಂಗ್ರೆಸ್‌ ಪಕ್ಷವು ದೇಶದಲ್ಲಿ ಮತ್ತೆ ʼಕಂಟ್ರೋಲ್‌ ರಾಜ್ʼ ತರಲು ಯತ್ನಿಸುತ್ತಿದೆ,” ಎಂದು ಅವರು ಆರೋಪಿಸಿದರು.

“ವರದಿ ಶನಿವಾರ ಬಿಡುಗಡೆಗೊಂಡಿತ್ತು, ಅವರು ರವಿವಾರದಂದು ಇದೇ ವಿಚಾರವನ್ನು ಆಕ್ರಮಣಕಾರಿಯಾಗಿ ಮಂಡಿಸಿದರು, ಕಾಂಗ್ರೆಸ್‌ ಪಕ್ಷದ ರಾಜಕೀಯ ಟೂಲ್‌ ಕಿಟ್‌ ಮತ್ತು ಚಿಟ್‌ ರಾಜಕೀಯ ಆಗಿದೆ,” ಎಂದು ಅವರು ವ್ಯಂಗ್ಯವಾಡಿದರು.

“ಭಾರತದ ಸ್ಟಾಕ್‌ ಮಾರ್ಕೆಟ್‌ ಸ್ಥಿರವಾಗಿದೆ ಎಂಬುದು ನಮಗೆ ಹೆಮ್ಮೆಯ ಸಂಗತಿ, ನಾವು ಸಣ್ಣ ಹೂಡಿಕೆದಾರರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಅವರು ಈ ಟೂಲ್‌ ಕಿಟ್‌ ಮತ್ತು ಹಿಂಡೆನ್‌ಬರ್ಗ್‌ ವರದಿಯನ್ನು ನಂಬುವುದಿಲ್ಲ ಎಂಬುದು ಇದರ ಅರ್ಥವಾಗಿದೆ,” ಎಂದು ರವಿಶಂಕರ್‌ ಪ್ರಸಾದ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News